ಮೂಡುಬಿದಿರೆ: ಮೂಡುಬಿದಿರೆ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಅದಾನಿ ಸಂಸ್ಥೆಯ ವತಿಯಿಂದ 25 ಲಕ್ಷ ರೂ ಮೊತ್ತದ ದೇಣಿಗೆ ನೀಡಿದೆ. ಅದಾನಿ ಫೌಂಡೇಶನ್‌ನಿಂದ ನೀಡಲಾಗಿರುವ ಈ ದೇಣಿಗೆಯನ್ನು ಅದಾನಿಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಕಿಶೋರ್ ಆಳ್ವ ಗುರುವಾರ ಕ್ಷೇತ್ರದ ಆಡಳಿತ ಮೊಕ್ತೇಸರ ಕುಲದೀಪ ಎಂ ಅವರಿಗೆ ಹಸ್ತಾಂತರಿಸಿದರು.