ಮೂಡುಬಿದಿರೆಯ ಎಕ್ಸಲೆಂಟ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ INSPIRE AWARD MANAK-2024 ಕ್ಕೆ ಆಯ್ಕೆ

ಮೂಡುಬಿದಿರೆಯ ಎಕ್ಸಲೆಂಟ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ INSPIRE AWARD MANAK-2024 ಕ್ಕೆ ಆಯ್ಕೆ


ಮೂಡುಬಿದಿರೆ: ಭಾರತೀಯ ವಿಜ್ಞಾನ ಮಟ್ಟದ ಹಾಗೂ ತಂತ್ರಜ್ಞಾನ ಇಲಾಖೆಯು ಆಯೋಜಕತ್ವದINSPIRE AWARD MANAK-2024 ಕ್ಕೆ ಸ್ಪರ್ದೆಯಲ್ಲಿ ಎಕ್ಸಲೆಂಟ್ ಆಂಗ್ಲಮಾಧ್ಯಮ ಶಾಲೆಯ ೮ನೇ ತರಗತಿಯ ವಿದ್ಯಾರ್ಥಿಗಳಾದ ಮನ್ವಿತ್‌ರಾಜ್ ಜೈನ್ ಹಾಗೂ ಮೈತ್ರಿ ಎಮ್ ಎಚ್ ಇವರುಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. 

ಮನ್ವಿತ್‌ರಾಜ್ ಜೈನ್ ಇವರುElectricity generation by busy High way   ಹಾಗೂ ಮೈತ್ರಿ ಎಮ್ ಎಚ್ ಇವರು Motar  bike theft detector  ವಿಷಯಕ್ಕೆ ಸಂಬಂಧಿಸಿ ವೈಜ್ಞಾನಿಕ ಮಾದರಿಗಳನ್ನು ಸಿದ್ಧಗೊಳಿಸಿದ್ದರು. ಇವರೀರ್ವರ ಮಾದರಿಗಳು ಇದೀಗ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗುವುದರೊಂದಿಗೆ ರೂ.೧೦,೦೦೦ ವಿದ್ಯಾರ್ಥಿವೇತನಕ್ಕೆ ಅರ್ಹರಾಗಿರುತ್ತಾರೆ.

ಈ ಹಿಂದೆಯೂ ಕೂಡ ವೈಜ್ಞಾನಿಕ ಮಾದರಿ, ವೈಜ್ಞಾನಿಕ ಪ್ರಬಂಧಂಗಳ ಮೂಲಕ ಎಕ್ಸಲೆಂಟ್ ಸಂಸ್ಥೆಯ ಹಲವು ವಿದ್ಯಾರ್ಥಿಗಳು ರಾಜ್ಯ- ರಾಷ್ಟç- ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಗೊಂಡಿರುವುದನ್ನು ಇಲ್ಲಿ ಸ್ಮರಿಸಲಾಗಿದೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಶ್ರೀ ಯುವರಾಜ ಜೈನ್,  ಕಾರ್ಯದರ್ಶಿಗಳಾದ ಶ್ರೀಮತಿ ರಶ್ಮಿತಾ ಜೈನ್, ಮುಖ್ಯೋಪಾಧ್ಯಾಯ ಶಿವಪ್ರಸಾದ್ ಭಟ್,  ಹಾಗೂ ಶಿಕ್ಷಕ ವೃಂದದವರು ವಿಶೇಷ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article