
ಸಿ.ಎಸ್. ಎಕ್ಸಿಕ್ಯೂಟಿವ್ ಪರೀಕ್ಷಾ ಫಲಿತಾಂಶ: ಆಳ್ವಾಸ್ ಉತ್ತಮ ಸಾಧನೆ
Monday, March 3, 2025
ಮೂಡುಬಿದಿರೆ: 2024 ಡಿಸೆಂಬರ್ ನಲ್ಲಿ ನಡೆದ ಸಿ.ಎಸ್. ಎಕ್ಸಿಕ್ಯೂಟಿವ್ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಬಿ.ಕಾಂ. ವಿದ್ಯಾರ್ಥಿಗಳಾದ ಅನನ್ಯ ಕೆ.ಎ.(258), ಬಿ ಸುಹಾಸ್ ರಾವ್ (230), ವಂದನಾ ಎಸ್.ಸಿ.(213), ನಿತ್ಯಾ ಸಂಜೀವ ಕುಲಕರ್ಣಿ (204), ನಿಶಿತಾ ಸಿ ಶೆಟ್ಟಿ (203) ಮತ್ತು ತಸ್ಮಯ್ ಎಮ್ (201) ಸಿ.ಎಸ್. ಎಕ್ಸಿಕ್ಯೂಟಿವ್ ಮೊಡ್ಯುಲ್ ೧ರಲ್ಲಿ ಮೊದಲ ಪ್ರಯತ್ನದಲ್ಲಿ ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ.
ಜೊತೆಯಲ್ಲಿ ಧನ್ವಿ ಹೆಚ್ ಪೈ (150) ಸಿ.ಎಸ್. ಎಕ್ಸಿಕ್ಯೂಟಿವ್ ಮೊಡ್ಯುಲ್ 2ರಲ್ಲಿ ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿರುತ್ತಾರೆ.
ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೂ ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಮತ್ತು ಪ್ರಾಂಶುಪಾಲ ಡಾ. ಕುರಿಯನ್ ಹಾಗೂ ಸಿ.ಎಸ್. ಸಂಯೋಜಕರು ಅಭಿನಂದಿಸಿದ್ದಾರೆ.