ಶ್ರೀ ಗಣಪತಿ ಮತ್ತು ಶ್ರೀ ನರಸಿಂಹ ದೇವರಿಗೆ ಕಲಶಾಭಿಷೇಕ

ಶ್ರೀ ಗಣಪತಿ ಮತ್ತು ಶ್ರೀ ನರಸಿಂಹ ದೇವರಿಗೆ ಕಲಶಾಭಿಷೇಕ


ಮೂಡುಬಿದಿರೆ: ಪುತ್ತಿಗೆ ಮಹತೋಬಾರ ಶ್ರೀ ಸೋಮನಾಥೇಶ್ವರ ದೇವಸ್ಥಾನ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಬುಧವಾರ ಶ್ರೀ ಗಣಪತಿ ಮತ್ತು ಶ್ರೀ ನರಸಿಂಹ ದೇವರಿಗೆ ಕಲಶಾಭಿಷೇಕ ಸಹಿತ ವಿವಿಧ ಕಾರ್ಯಕ್ರಮಗಳು ನಡೆಯಿತು. 

ಬೆಳಗ್ಗೆ ತತ್ವಹೋಮ, ತತ್ವಕಲಶಾಭಿಷೇಕ, ಚಂಡಿಕಾಯಾಗ, ಕಲಶ ಮಂಡಲ ರಚನೆ, ಸಾಯಂಕಾಲ ಬ್ರಹ್ಮಕಲಶಾಧಿವಾಸ, ಕುಂಭೇಶಕಲಶಾಧಿವಾಸ, ಕರ್ಕರಿಪೂಜೆ, ಅಧಿವಾಸ ಹೋಮಗಳು ನಡೆಯಿತು. 


ರಾತ್ರಿ ಚೌಟರಾಣಿ ಅಬ್ಬಕ್ಕ ವೇದಕೆಯಲ್ಲಿ ವಿದುಷಿ ಮಂಜುಳ ಸುಬ್ರಹ್ಮಣ್ಯ ನಾಟ್ಯರಂಗ ಪುತ್ತೂರು ತಂಡದಿಂದ ಭರತನಾಟ್ಯ ವೈಭವ, ವಿದುಷಿ ಡಾ.ಸಹನಾ ಭಟ್ ತಂಡದಿಂದ ನಾಟ್ಯ ವೈಭವ, ಮೂಡುಬಿದಿರೆ ಯಕ್ಷನಿಧಿ ಶಿಕ್ಷಣ ಸಂಸ್ಥೆ ಮತ್ತು ಮಕ್ಕಳ ಮೇಳದಿಂದ ಸಹಸ್ರ ಲಿಂಗೋದ್ಭವ ದೊಂದಿ ಬೆಳಕಿನ ಯಕ್ಷಗಾನ ನಡೆಯಿತು.


ತಿರುಮಲರಾಜ ಚೌಟ ವೇದಿಕೆಯಲ್ಲಿ ಸನಾತನ ನಾಟ್ಯಲಯ ಮಂಗಳೂರು, ಅರೆಹೊಳೆ ಪ್ರತಿಷ್ಠಾನ ಮಂಗಳೂರು, ನೃತ್ಯ ವಸಂತ ನಾಟ್ಯಾಲಯ ಕುಂದಾಪುರ, ನೃತ್ಯ ನಿಕೇತನ ಕೊಡವೂರು ತಂಡದಿಂದ ನೃತ್ಯೋಲ್ಲಾಸ ಕಾರ್ಯಕ್ರಮವಿತ್ತು. ಅಡಿಗಳ್ ಶ್ರೀನಿವಾಸ ಭಟ್ ವೇದಿಕೆಯಲ್ಲಿ ಬೆಳಗ್ಗೆ 8 ಗಂಟೆಯಿಂದ ಭಜನಾ ಕಾರ್ಯಕ್ರಮ ನಡೆಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article