ಫಿಲೋಮಿನಾ ಕಾಲೇಜಿನಲ್ಲಿ ಸಾಂಸ್ಕೃತಿಕ ವಿಸ್ತರಣಾ ಕಾರ್ಯಕ್ರಮ

ಫಿಲೋಮಿನಾ ಕಾಲೇಜಿನಲ್ಲಿ ಸಾಂಸ್ಕೃತಿಕ ವಿಸ್ತರಣಾ ಕಾರ್ಯಕ್ರಮ


ಪುತ್ತೂರು: ಸಂತ ಫಿಲೋಮಿನಾ ಕಾಲೇಜು ಯಕ್ಷಕಲಾ ಕೇಂದ್ರದ ಸಾಂಸ್ಕೃತಿಕ ವಿಸ್ತರಣಾ ಕಾರ್ಯಕ್ರಮವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆನಡ್ಕದಲ್ಲಿ ಜರಗಿತು. ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಾಂಸ್ಕೃತಿಕ ವೇದಿಕೆಯಲ್ಲಿ ‘ಪೂತು ಮಝರೆ ಕರ್ಣ’ ಯಕ್ಷ ಸಂವಾದ ಸಂಪನ್ನಗೊಂಡಿತು.

ಭಾರತೀಯ ಶಾಸ್ತ್ರೀಯ ಮತ್ತು ಜಾನಪದ ಕಲೆಗಳ ಪ್ರಸರಣದ ಮೂಲಕ ಜನಮಾನಸದಲ್ಲಿ ದೇಶದ ಸಾಂಸ್ಕೃತಿಕ ನೆಲೆಯ ಅರಿವನ್ನು ಮೂಡಿಸುವ ಕಾರ್ಯವನ್ನು ಸಾಂಸ್ಕೃತಿಕ ವಿಸ್ತರಣೆಯ ಮೂಲಕ ಸಂಸ್ಥೆಯು ಮಾಡುತ್ತಿದೆ.

ಮಹಾಭಾರತದ ಕರ್ಣ ಪರ್ವದ ಭಾಗವನ್ನು ವಿದ್ಯಾರ್ಥಿ ಕಲಾವಿದರಾದ ಶ್ರೀದೇವಿ ಭಟ್ಟ ಕಾಣಿಯೂರು ತೃತೀಯ ಬಿಎಸ್ಸಿ ಮತ್ತು ಮೇಘಶ್ರೀ ತೃತೀಯ ಬಿಸಿಎ ಅಪೂರ್ವವಾಗಿ ಪ್ರಸ್ತುತಪಡಿಸಿದರು.


ಯಕ್ಷಕಲಾ ಕೇಂದ್ರದ ಸಂಯೋಜಕರೂ, ಬಿಬಿಎ ವಿಭಾಗದ ಉಪನ್ಯಾಸಕರೂ ಆದ ಪ್ರಶಾಂತ್ ರೈ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಡಾ. ಚಂದ್ರಶೇಖರ ಮತ್ತು ಪುಷ್ಪ ಎನ್. ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ರೆ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಶುಭ ಹಾರೈಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article