ಪ್ರೊ. ಪ್ರಕಾಶ್ ಪಿ. ಕಾರಟ್ ದತ್ತಿ ಉಪನ್ಯಾಸ-2025

ಪ್ರೊ. ಪ್ರಕಾಶ್ ಪಿ. ಕಾರಟ್ ದತ್ತಿ ಉಪನ್ಯಾಸ-2025

ಮಂಗಳೂರು: ಪ್ರೊ. ಪ್ರಕಾಶ್ ಪಿ. ಕಾರಟ್ ದತ್ತಿ ಉಪನ್ಯಾಸ ಕಾರ್ಯಕ್ರಮವು ಮಂಗಳೂರು ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಕಾಲೇಜಿನಲ್ಲಿ ಭೌತಶಾಸ್ತ್ರ ವಿಭಾಗದ ವತಿಯಿಂದ ಮಾ.8 ರಂದು ಮಧ್ಯಾಹ್ನ 2.30ಕ್ಕೆ ನಡೆಯಲಿದೆ.

ಮುಂಬೈನ ಸೋಮೈಯಾ ವಿದ್ಯಾವಿಹಾರ್ ವಿಶ್ವವಿದ್ಯಾಲಯದ SciSER ಇಲ್ಲಿನ ಸಹ ಪ್ರಾಧ್ಯಾಪಕ ಡಾ ಎ.ವಿ. ರಾಧಾಕೃಷ್ಣನ್ ಅವರು “Structure and Dynamics in Soft and Living, Matter, through Scattering and Advanced Optical imaging” ಎಂಬ ವಿಷಯದ ಬಗ್ಗೆ ಉಪನ್ಯಾಸವನ್ನು ನೀಡಲಿದ್ದಾರೆ. 

ಡಾ. ಪಿ. ದಯಾನಂದ ಪೈ-ಪಿ. ಸತೀಶ ಪೈ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಕರ ಭಂಡಾರಿ ಎಂ. ಅವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ) ಇಲ್ಲಿನ ನಿವೃತ್ತ ಪ್ರೊಫೆಸರ್ ನಾರಾಯಣ ಭಟ್ ಹಾಗೂ ಸೇಂಟ್ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ)ನ ಪ್ರೊಫೆಸರ್ ಎಮೆರಿಟಸ್ ಪ್ರೊ. ಪ್ರಕಾಶ್ ಪಿ. ಕಾರಟ್ ಇವರು ಮುಖ್ಯ ಅತಿಥಿಗಳಾಗಿರುತ್ತಾರೆ. ಪ್ರೊ. ಪ್ರಕಾಶ್ ಪಿ. ಕಾರಟ್ ದತ್ತಿ ಉಪನ್ಯಾಸಗಳ ಸರಣಿಯ 11ನೇ ಉಪನ್ಯಾಸ ಇದು.

1967ರಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಭೌತಶಾಸ್ತ್ರ ವಿಭಾಗ ಸೇರಿದ ಪ್ರೊ. ಕಾರಟ್, 1982ರಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗಕ್ಕೆ ಸೇರಿ ಪ್ರಾಧ್ಯಾಪಕರಾಗಿ, ನಂತರ ರಿಜಿಸ್ಟ್ರಾರ್ (ಮೌಲ್ಯಮಾಪನ) ಆಗಿ ಸೇವೆ ಸಲ್ಲಿಸಿದರು. ಬೆಂಗಳೂರಿನ ಪ್ರತಿಷ್ಠಿತ ರಾಮನ್ ಸಂಶೋಧನಾ ಸಂಸ್ಥೆಯಲ್ಲಿ ಡಾ. ಎಸ್. ಚಂದ್ರಶೇಖರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆಯನ್ನು ಪೂರೈಸಿದ ಪ್ರೊ. ಕಾರಟ್ ಅವರು ನಾಲ್ಕು ಸಂಶೋಧನಾ ಮತ್ತು ಆರು ಎಮ್‌ಫಿಲ್ ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ಮಾರ್ಗದರ್ಶನ ನೀಡಿರುವರು. 2004 ರಲ್ಲಿ ಸೇವೆಯಿಂದ ನಿವೃತ್ತರಾದ ಬಳಿಕ ಸೇಂಟ್ ಅಲೋಶಿಯಸ್ ಕಾಲೇಜು (ಸ್ವಾಯತ್ತ) ಇಲ್ಲಿನ ಭೌತಶಾಸ್ತ್ರದ ಸ್ನಾತಕೋತ್ತರ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article