.jpg)
ಪುಸ್ತಕ ಮೇಳದಲ್ಲಿ ಸ್ಪೀಕರ್‌ಗೆ ಅಭಿನಂದನೆ
Tuesday, March 4, 2025
ಮಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾಗಿರುವ ಪುಸ್ತಕ ಮೇಳದಲ್ಲಿ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಹಾಗೂ ವಿಧಾನಪರಿಷತ್ ಅಧ್ಯಕ್ಷ ಬಸವರಾಜ ಹೊರಟ್ಟಿ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ನಿಕಟಪೂರ್ವ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಶಾಲು ಹೊದಿಸಿ ಅಭಿನಂದಿಸಿದರು.
ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸಲಾಗಿರುವ ಈ ಬೃಹತ್ ಪುಸ್ತಕ ಮೇಳವು ಒಂದು ಚರಿತ್ರಾರ್ಹ ಸಾಹಿತ್ಯ ಸೇವೆಯಾಗಿದೆ. ಇಂತಹ ಸಮಗ್ರ ರೂಪದ ಪುಸ್ತಕ ಮೇಳ ಪ್ರತಿ ವರ್ಷವೂ ಆಯೋಜನೆಗೊಳ್ಳಲಿ ಎಂದರಲ್ಲದೆ, ಆಯೋಜನೆಯ ಪ್ರಮುಖ ರೂವಾರಿ, ನಮ್ಮ ಜಿಲ್ಲೆಯ ನೆಚ್ಚಿನ ಹಾಗೂ ಹೆಮ್ಮೆಯ ನೇತಾರ ಯು.ಟಿ. ಖಾದರ್ ನಿಜಕ್ಕೂ ಅಭಿನಂದನಾರ್ಹರು ಎಂದು ಹೇಳಿದರು.
ಈ ಸಂದರ್ಭ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಪ್ರಸಿದ್ಧ ಐ.ಬಿ.ಎಚ್. ಪ್ರಕಾಶನದ ಪ್ರಮುಖ ಸಂಜಯ ಅಡಿಗ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮರ್, ಜನಾರ್ದನ ಹಂದೆ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭ ಇನ್ಫೋಸಿಸ್ ಫೌಂಡೇಶನ್‌ನ ರೂವಾರಿ ಸುಧಾ ಮೂರ್ತಿ ಅವರನ್ನು ಕೂಡ ಕಲ್ಕೂರ ಭೇಟಿಯಾದರು.