
ನಾಲ್ಕು ತಿಂಗಳ ಮಗುವನ್ನು ರಸ್ತೆ ಬದಿ ಬಿಟ್ಟು ಹೋದ ಪಾಪಿಗಳು
Saturday, March 22, 2025
ಉಜಿರೆ: ಬೆಳಾಲು ಗ್ರಾಮದ ಕೊಡೊಳುಕೆರೆ ಮುಂಡ್ರೊಟ್ಟು ರಸ್ತೆ ಬದಿಯಲ್ಲಿ ಸುಮಾರು ನಾಲ್ಕು ತಿಂಗಳ ಹೆಣ್ಣು ಹಸುಗೂಸನ್ನು ಯಾರೋ ರಸ್ತೆ ಬದಿ ಬಿಟ್ಟು ಹೋಗಿರುವುದು, ಮಾ.22 ರಂದು ಬೆಳಗ್ಗೆ ಮಗು ಅಳುವುದನ್ನು ಕೇಳಿದ ಪರಿಸರದ ನಿವಾಸಿಗಳು ಮಗುವನ್ನು ರಕ್ಷಿಸಿ ಆರೈಕೆ ಮಾಡಿ ಧರ್ಮಸ್ಥಳ ಪೊಲೀಸರಿಗೆ ಹಾಗೂ ಅರೋಗ್ಯ ಇಲಾಖೆ ಅಧಿಕಾರಿಗಳ ವಶಕ್ಕೆ ನೀಡಿದ್ದಾರೆ.
ಹೆಚ್ಚಿನ ವಿವರಗಳು ತನಿಖೆಯಿಂದ ತಿಳಿದುಬರಬೇಕಾಗಿದೆ. ಎಳೆಯ ಮಗುವನ್ನು ಅನಾಥವಾಗಿ ಬಿಟ್ಟು ಹೋದ ಪಾಪಿಗಳ ಅಮಾನವೀಯ ವರ್ತನೆಗೆ ಎಲ್ಲೆಡೆಯಿಂದ ವ್ಯಾಪಕ ಖಂಡನೆ ವ್ಯಕ್ತಗೊಂಡಿದೆ.