ಮದ್ಯವರ್ಜನ ಶಿಬಿರದಿಂದ ವ್ಯಕ್ತಿತ್ವ ವೃದ್ಧಿ: ಡಾ. ಡಿ. ವೀರೇಂದ್ರ ಹೆಗ್ಗಡೆ

ಮದ್ಯವರ್ಜನ ಶಿಬಿರದಿಂದ ವ್ಯಕ್ತಿತ್ವ ವೃದ್ಧಿ: ಡಾ. ಡಿ. ವೀರೇಂದ್ರ ಹೆಗ್ಗಡೆ


ಉಜಿರೆ: ಮದ್ಯಪಾನದ ‘ವ್ಯಸನವು ನಮ್ಮ ಬದ್ಧತೆ ಮತ್ತು ತೀರ್ಮಾನಗಳಲ್ಲಿ ದೋಷವುಂಟು ಮಾಡಿ ಮನಸ್ಸು ಮತ್ತು ಶರೀರಕ್ಕೆ ಅಪಾಯ ತಂದೊಡ್ಡುತ್ತದೆ. ಆದುದರಿಂದ ಮದ್ಯಪಾನವು ವಿಷ ಮತ್ತು ದೋಷಪೂರ್ಣವಾಗಿದೆ. ಇದನ್ನು ಪೂರ್ಣ ಪ್ರಮಾಣದಲ್ಲಿ ತ್ಯಜಿಸುವ ಸಂಕಲ್ಪ ಮಾಡಿಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿ ಸಮಾಜದಲ್ಲಿ ಮಾದರಿಯಾಗಿ ಬದುಕಬೇಕು’ ಎಂದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಅವರು ಇಂದು ಉಜಿರೆ ಲಾಲದಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆದ 244ನೇ ವಿಶೇಷ ಮದ್ಯವರ್ಜನ ಶಿಬಿರದ ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. 


ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಪ್ರೇರಣೆ ಕೊಡುವುದರ ಮೂಲಕ ಶಿಬಿರಾರ್ಥಿಗಳ ಮನಪರಿವರ್ತನೆ ಮಾಡಲಾಗುತ್ತದೆ. ಕೆಟ್ಟ ಅಭ್ಯಾಸಗಳು ಮನುಷ್ಯರನ್ನು ಸುಲಭವಾಗಿ ಹಿಡಿದುಕೊಳ್ಳುತ್ತದೆ ಆದರೆ ಅದನ್ನು ಬಿಡಲು ಕಷ್ಟ ಪಡಬೇಕಾಗುತ್ತದೆ. ದುಶ್ವಟವೆಂಬುದು ತಮ್ಮ ಅರಿವಿಲ್ಲದೆಯೇ ಪ್ರಾರಂಭ ಮಾಡುವುದಾಗಿದೆ. ಈ ಹಿಂದೆ ಮದ್ಯವರ್ಜನ ಶಿಬಿರಕ್ಕೆ ಶಿಬಿರಾರ್ಥಿಗಳನ್ನು ಒತ್ತಾಯ ಪೂರ್ವಕವಾಗಿ ಕರೆದುಕೊಂಡು ಬರಲಾಗುತ್ತಿತ್ತು, ಆದರೆ ಇತ್ತಿಚೀನ ದಿನಗಳಲ್ಲಿ ಸ್ವಪ್ರೇರಣೆಯಿಂದ ಶಿಬಿರಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ ಎಂದರು.

ಈ ವಿಶೇಷ 8 ದಿನದ ಶಿಬಿರದಲ್ಲಿ ರಾಜ್ಯಾದ್ಯಂತ 76 ಶಿಬಿರಾರ್ಥಿಗಳು ಭಾಗವಹಿಸಿರುತ್ತಾರೆ. 

ಜನಜಾಗೃತಿ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. ಪಾಸ್, ಯೋಜನಾಧಿಕಾರಿ ಮಾಧವ ಗೌಡ, ಶಿಬಿರಾಧಿಕಾರಿಗಳಾದ ನಾಗೇಂದ್ರ ಹೆಚ್.ಎಸ್., ದಿವಾಕರ್ ಪೂಜಾರಿ, ಆರೋಗ್ಯ ಸಹಾಯಕಿ ನೇತ್ರಾವತಿ, ಪ್ರೆಸಿಲ್ಲಾ ಡಿ’ಸೋಜಾ, ಆಪ್ತಸಲಹೆಗಾರ ಜಿ.ಆರ್. ಮಧು ಅವರು ಸಹಕರಿಸಿರುತ್ತಾರೆ. ಮುಂದಿನ ವಿಶೇಷ ಶಿಬಿರವು ಎ.7 ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article