ಆಳ್ವಾಸ್ ಕಾಲೇಜಿನ ಹಿಂದಿ ವಿಭಾಗದಿಂದ ‘ಉಮಂಗ್-2025’

ಆಳ್ವಾಸ್ ಕಾಲೇಜಿನ ಹಿಂದಿ ವಿಭಾಗದಿಂದ ‘ಉಮಂಗ್-2025’

ಅತ್ಯುತ್ಸಾಹದಲ್ಲಿ ಮುಳುಗದಿರಿ, ಇದು ಜಗದ ಆಟ: ರಾಯಿ


ವಿದ್ಯಾಗಿರಿ: ‘ಉಮಂಗ್ ಮೇ  ಮತ್ ಫಾಸ್ ಯೇ ದುನಿಯಾ ಕಾ ಖೇಲ್ ಹೇ’ (ಅತ್ಯುತ್ಸಾಹದಲ್ಲಿ ಮುಳುಗದಿರು, ಇದು ಜಗದ ಆಟ) ಎಂದು  ಮೂಡುಬಿದಿರೆಯ ಜೈನ್ ಪ್ರೌಢಶಾಲೆಯ ನಿವೃತ್ತ ಹಿಂದಿ ಶಿಕ್ಷಕ ರಾಯಿ ರಾಜಕುಮಾರ್ ಹೇಳಿದರು.

ಆಳ್ವಾಸ್ (ಸ್ವಾಯತ್ತ)  ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಹಿಂದಿ ವಿಭಾಗದ ವತಿಯಿಂದ ಆಯೋಜಿಸಲಾದ 'ಉಮಂಗ್-2025' ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.


‘ಎಲ್ಲಾ ಭಾಷೆಯು ನಮಗೆ ಉಪಯೋಗಿಯಾಗಿರುತ್ತೆ. ಅದು ಇಂಗ್ಲಿಷ್, ಹಿಂದಿ, ಕನ್ನಡ ಯಾವುದೇ ಭಾಷೆ ಆಗಲಿ. ಅವುಗಳನ್ನು ಬಳಸಿಕೊಂಡು ನಮ್ಮನು ನಾವು ಬೆಳಸಿಕೊಳ್ಳಬೇಕಾದ ಅವಶ್ಯಕತೆ ಇದೆ’ ಎಂದರು.  

ಉಮಂಗ್ ಎಂದರೆ ಖುಷಿ, ಆನಂದ, ಉಲ್ಲಾಸ, ಅತ್ಯುತ್ಸಾಹ.  ಇಂತಹ ಕಾರ್ಯಕ್ರಮಗಳ ಅವಶ್ಯಕತೆ ಇದೆ,  ಸುಖದ ಅನುಭವ ಎಲ್ಲರಿಗೂ ಸಿಗಬೇಕು ಅದುವೇ ಉಮಂಗ್ ಎಂದು ಹೇಳಿದರು.


ಯಾವುದೇ ಕೆಲಸವಾಗಲಿ, ಅದನ್ನು ಮನಸ್ಸಿನಿಂದ ಮಾಡಿದಾಗಲೇ ಉತ್ಸಾಹ. ಖುಷಿ ಎನ್ನುವಂತದ್ದು, ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ನಮ್ಮ ಬದುಕನ್ನು ನಾವು ಎಷ್ಟರ ಮಟ್ಟಿಗೆ ಉಪಯೋಗಿಸಿಕೊಳ್ಳುತ್ತೇವೆ. ಅಷ್ಟರ ಮಟ್ಟಿಗೆ ನಾವು ಬೆಳೆಯಲು ಸಾಧ್ಯವಿದೆ’ ಎಂದರು.

ಝೆಂಕೊ ಐಒ ಸಂಸ್ಥೆಯ ಸಿಇಒ ಡಿಂಪಲ್ ಪರ್ಮಾರ್  ಮಾತನಾಡಿ, ‘ಹಿಂದಿ ಕೇವಲ ಒಂದು ಭಾಷೆಯಲ್ಲ. ಅದು ನಮ್ಮ ಸಾಂಸ್ಕೃತಿಕ ಗುರುತು ಹಾಗೂ  ಘನತೆಯಾಗಿದೆ. ಭಾಷೆಯಯೊಂದಿಗೆ ಅಭಿವೃದ್ಧಿ ಹೊಂದುವ ದೇಶವು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತದೆ. ಹಿಂದಿ ನಮ್ಮನು ಪ್ರೀತಿ ಸೂತ್ರದಲ್ಲಿ ಒಂದಾಗಿಸುತ್ತದೆ. ಇದು ಸಂವಹನದ ಮಾದ್ಯಮವಷ್ಟೇ ಅಲ್ಲ. ಇದು ಸಂವೇದನೆಯ ಆತ್ಮವಾಗಿದೆ.  ಭಾಷೆ ಗಟ್ಟಿಯಾಗಿದ್ದರೆ, ಆ ಭಾಷಿಕರ ಯೋಚನೆಯೂ ದೃಢವಾಗಿರುತ್ತದೆ.  ನಿಮಗೆ ಜೀವನದಲ್ಲಿ ದೊಡ್ಡ ಸವಾಲುಗಳು ಬರಲಿವೆ.  ನಾವು ಯಾವುದಕ್ಕೂ ಹೆದರುವ ಅವಶ್ಯಕತೆ ಇಲ್ಲ ಎಂದರು.

ಜೀವನದಲ್ಲಿ ಫಲಿತಾಂಶದ ಬಗ್ಗೆ ಯೋಚಿಸಬೇಡಿ, ಯಾವಾಗಲೂ ನೀವು ಸ್ಪರ್ಧೆಯನ್ನು ಹೇಗೆ ಎದುರಿಸುತ್ತೀರಿ ಎಂಬುದರ ಮೇಲೆ ನಿಮ್ಮ ಗುರಿಯನ್ನು ಕೇಂದ್ರೀಕರಿಸಿ. ನೀವು ನಿಮ್ಮ ಮೇಲೆ ನಂಬಿಕೆ ಇಡಿ. ಏಕೆಂದರೆ ಸೋಲು ಗೆಲುವು ಮುಖ್ಯವಲ್ಲ. ನಿಮ್ಮ ಸಾಮರ್ಥ್ಯ ಮತ್ತು ದೃಢಸಂಕಲ್ಪ ಮಾತ್ರ ಮುಖ್ಯವಾಗುತ್ತದೆ. ನೀವು ನಿಮ್ಮನ್ನು ಯಾರಿಗೂ ಸಾಬೀತುಪಡಿಸುವ ಅಗತ್ಯವಿಲ್ಲ  ನೀವು ಸುಧಾರಿಸಿಕೊಳ್ಳುವುದು ಮುಖ್ಯ. ಅದಕ್ಕಾಗಿ ನಿರಂತರ ಪ್ರಯತ್ನ ಮುಂದುವರಿಸಿ’ ಎಂದರು.

ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದ ಆಳ್ವಾಸ್ ಪರೀಕ್ಷಾಂಗ ವಿಭಾಗದ ಕುಲಸಚಿವ ಡಾ ಎನ್.ಪಿ. ನಾರಾಯಣ ಶೆಟ್ಟಿ ಮಾತನಾಡಿ, ಭಾಷೆ ಮನುಷ್ಯನ ವಿಕಾಸಕ್ಕೆ ದಾರಿಯನ್ನು ಒದಗಿಸುತ್ತದೆ. ಸ್ಪರ್ಧೆಯಲ್ಲಿ ಸೋಲು ಗೆಲುವು ಸಾಮಾನ್ಯ. ಸೋತಾಗ ಧೃತಿಗೆಡದೆ, ಧರ‍್ಯದಿಂದ ಎದುರಿಸಬೇಕು ಎಂದರು.

‘ಉಮಂಗ್-2025' ರ ಅಂಗವಾಗಿ ನಡೆದ ಸ್ಪರ್ಧೆಗಳಾದ ಚರ್ಚಾ ಸ್ಪರ್ಧೆ, ಸ್ಟ್ಯಾಂಡ್ ಆಪ್ ಕಾಮೆಡಿ, ಭಾಷಾಂತರ, ರೀಲ್ಸ್, ಕಿರು ಪ್ರಹಸನದಲ್ಲಿ ಉಜಿರೆಯ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಬಹುಮಾನ ಪಡೆದರು. ಸೈಂಟ್ ಅಲೋಶಿಯಸ್ ಡೀಮ್ಡ್ ಟು ಬಿ ವಿವಿಯ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದರು.      

ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಹಿಂದಿ ವಿಭಾಗದ ಸಂಯೋಜಕ ಡಾ. ದತ್ತಾತ್ರೇಯ ಹೆಗ್ಡೆ, ಹಿರಿಯ ವಿದ್ಯಾರ್ಥಿಗಳಾದ  ತನೀಷಾ, ಸ್ಪರ್ಷ, ವಿದ್ಯಾರ್ಥಿ ಸಂಯೋಜಕರಾದ ಖುಷಿ ಕುಡಾಲ್ಕರ್ ಮತ್ತು ಜೊನಾಥನ್ ಡಿ’ಸೋಜಾ ಇದ್ದರು.  ವಿದ್ಯಾರ್ಥಿನಿ ವಿನೆಟ್ ವಾಸ್, ವೃದ್ಧಿ ರೈ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article