
ಪೊಳಲಿ ಜಾತ್ರಾ ಮಹೋತ್ಸವ: ಮಹಾರಥೋತ್ಸವ
Friday, April 11, 2025
ಬಂಟ್ವಾಳ: ಸಾವಿರ ಸೀಮೆಯ ಒಡತಿ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜಾತ್ರಾ ಮಹೋತ್ಸವದ ಪ್ರಯುಕ್ತ ಮಹಾರಥೋತ್ಸವವು ಗುರುವಾರ ಸಂಜೆ ಸಂಭ್ರಮ,ಸಡಗರದಿಂದ ನಡೆಯಿತು.
ಐದು ದಿನಗಳ ಕಾಲ ಪೊಳಲಿಯಲ್ಲಿ ಚೆಂಡಿನ ಉತ್ಸವ ನಡೆದು,ಬಳಿಕ ಕೊನೆಯದಾಗಿ ವೈಭವಯುತವಾದ ಮಹಾರಥೋತ್ಸವವು ಭಕ್ತಗಡಣದ ಸಮ್ಮುಖದಲ್ಲಿನೆರವೇರಿತು.
ಶ್ರೋರಾಜರಾಜೇಶ್ವರಿ ದೇವಿಯನ್ನು ಹೊತ್ತುಕೊಂಡ ಹೂವಿನಿಂದ ಅಲಂಕೃತವಾದ ರಥವನ್ನು ನೂರಾರು ಮಂದಿ ಭಗವದ್ಬಕ್ತರು ಸೇರಿಕೊಂಡು ರಥಬೀದಿಯ ಸುತ್ತಲು ರಥವನ್ನು ಎಳೆದು ಸಂಭ್ರಮಪಟ್ಟರು.
ಚೆಂಡೆ,ವಿವಿಧ ವಾದ್ಯಗೋಷ್ಡಿ,ಕೊಂಬು ಕಹಳೆ ಮೆರವಣಿಗೆಗೆ ವಿಶೇಷ ಮೆರಗು ನೀಡಿತು.ಆಕರ್ಷಕ ಸುಡುಮದ್ದು ಪ್ರದರ್ಶನವು ನಡೆಯಿತು.
ದೇವಳದ ತಂತ್ರಿಗಳು, ಅರ್ಚಕರು, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ,ದೇವಳದ ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ ಸಹಿತ ಸ್ಥಳೀಯ ಪ್ರಮುಖರು ಹಾಜರಿದ್ದರು.
ಸಾವಿರಾರು ಭಕ್ತರು ದೇವಳದ ಸುತ್ತಲು ನಿಂತು ಶ್ರೀದೇವಿಯ ರಥೋತ್ಸವವನ್ನು ಕಣ್ತುಂಬಿಕೊಂಡರು.