
ವಿಜ್ಞಾನ ಮಾದರಿಯಲ್ಲಿ ಭಾರತವನ್ನು ವಿಶ್ವ ವೇದಿಕೆಯಲ್ಲಿ ಪ್ರತಿನಿಧಿಸಿದ ಶಕ್ತಿ ರೆಸಿಡೆನ್ಯಿಯಲ್ ಶಾಲೆ 8ನೇ ತರಗತಿ ವಿದ್ಯಾರ್ಥಿ ಶಾಸ್ತಾ ನಾಕ್
Thursday, April 3, 2025
ಮಂಗಳೂರು: ಶಕ್ತಿನಗರದ ಶಕ್ತಿ ರೆಸಿಡೆನ್ಯಿಯಲ್ ಶಾಲೆ ೮ನೇ ತರಗತಿ ವಿದ್ಯಾರ್ಥಿ ಶಾಸ್ತಾ ನಾಕ್ 2025 ಮಾರ್ಚ್ 21ರಿಂದ 27ರ ತನಕ ಉತ್ತರ ಆಫ್ರೀಕದ ಟುನೀಶಿಯಾದಲ್ಲಿ ನಡೆದ ‘The International Festival of Engineering Science and Technology in , Tunisia (1-FEST2 )ನಲ್ಲಿ ಸೈನ್ಸ್ ಸೊಸೈಟಿ ಆಪ್ ಇಂಡಿಯಾ’ದಿಂದ ಏಕೈಕ ಭಾರತೀಯ ಪ್ರತಿನಿಧಿಯಾಗಿ ಭಾಗವಹಿಸಿ ‘ಆಟೋಮ್ಯಾಟಿಕ್ ಕೋಕೊ ಸಾಪ್ ಎಕ್ಸ್ ಟ್ರಾಕ್ಟರ್’ ಎಂಬ ವಿಜ್ಞಾನ ಮಾದರಿಯನ್ನು ಪ್ರದರ್ಶಿಸಿದರು.
ಈ ಕಾರ್ಯಕ್ರಮಗಳಲ್ಲಿ ಜಗತ್ತಿನ 70 ದೇಶಗಳ 1400 ಪ್ರತಿನಿಧಿಗಳು ಭಾಗವಹಿಸಿದರು. ಈ ವಿಜ್ಞಾನ ಮಾದರಿಯಲ್ಲಿ ತೆಂಗಿನ ಮರದಿಂದ ನೀರಾವನ್ನು ಅಟೋಮ್ಯಾಟಿಕ್ ಯಂತ್ರದ ಮೂಲಕ ಇಳಿಸುವ ಪ್ರಾತಿಕ್ಷತೆಯನ್ನು ನೀಡಿರುತ್ತಾರೆ. ತೆಂಗಿನ ಮರದ ಕೊಂಬನ್ನು ನೀರಾ ತೆಗೆಯಲು ಅದಾಗೊಳಿಸುವ ಸರಳ ವಿಧಾನದ ಮೂಲಕ ಮಾನವ ರಹಿತವಾಗಿ ನೀರಾ ಇಳಿಸುವ ಮಾದರಿಗೆ ಅಂತರಾಷ್ಟ್ರೀಯ ಮನ್ನಣೆ ದೊರೆತು ಅಯ್ಕೆಯಾಗಿರುವುದು ಶಾಸ್ತಾ ನಾಕ್‌ನ ಸಾಧನೆಗೆ ಸಿಕ್ಕಿರುವ ಬಹು ದೊಡ್ಡ ಯಶಸ್ಸಾಗಿರುತ್ತದೆ.
ಶಾಸ್ತಾ ನಾಕ್ ಕಳೆದ 3 ವರ್ಷಗಳಿಂದ ಅನೇಕ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಸಾಧನೆಯನ್ನು ಮಾಡುತ್ತಾ ಬರುತ್ತಿದ್ದಾನೆ. ಇವನ ಮಾದರಿಯು ನಮ್ಮ ದೇಶದ ರೈತರಿಗೆ ಕಡಿಮೆ ಖರ್ಚಿನಲ್ಲಿ ನೀರಾ ಇಳಿಸಲು ಉಪಯೋಗವಾಗುವ ತಂತ್ರಜ್ಞಾನವಾಗಿದೆ. ಈ ಸಾಧನೆಯನ್ನು ಗುರುತಿಸಿ ಟುನೀಶಿಯದಲ್ಲಿ ಬೆಳ್ಳಿ ಪದಕ ಮತ್ತು ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಇವರು ಭಾರತವನ್ನು ವಿಶ್ವ ವೇದಿಕೆಯಲ್ಲಿ ಪ್ರತಿನಿಧಿಸಿದ ಶಕ್ತಿ ರೆಸಿಡೆನ್ಯಿಯಲ್ ಶಾಲೆಯ ವಿದ್ಯಾರ್ಥಿಯಾಗಿದ್ದು, ಶ್ರೀನಾಥ್ ನಾಕ್ ವಿ. ಹಾಗೂ ಚಂದ್ರಿಕಾ ಶ್ರೀನಾಥ್ ದಂಪತಿಗಳ ಸುಪುತ್ರ.
ಇವರ ಅಸಾಧಾರಣ ಸಾಧನೆಗೆ ಶಕ್ತಿ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಡಾ. ಕೆ.ಸಿ. ನಾಕ್, ಕಾರ್ಯದರ್ಶಿ ಸಂಜಿತ್ ನಾಕ್. ಪ್ರಧಾನ ಸಲಹೆಗಾರ ರಮೇಶ್ ಕೆ. ಶಕ್ತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ ಮೂರ್ತಿ ಹಾಗೂ ಶಕ್ತಿ ರೆಸಿಡೆನ್ಯಿಯಲ್ ಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್, ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.