‘ಶಕ್ತಿ ಕ್ಯಾನ್ ಕ್ರಿಯೇಟ್’ ಬೇಸಿಗೆ ಶಿಬಿರ ಉದ್ಘಾಟನೆ

‘ಶಕ್ತಿ ಕ್ಯಾನ್ ಕ್ರಿಯೇಟ್’ ಬೇಸಿಗೆ ಶಿಬಿರ ಉದ್ಘಾಟನೆ


ಮಂಗಳೂರು: ಶಕ್ತಿನಗರದ ಶಕ್ತಿ ವಸತಿ ಶಾಲೆ ಇಲ್ಲಿ ಇಂದು ‘ಶಕ್ತಿ ಕ್ಯಾನ್ ಕ್ರಿಯೇಟ್’ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭವು ಶಕ್ತಿ ವಸತಿ ಶಾಲೆಯ ರೇಷ್ಮಾ ಮೆಮೋರಿಯಲ್ ಆಡಿಟೋರಿಯಂನಲ್ಲಿ ನೆರವೇರಿತು. 


ಕಾರ್ಯಕ್ರಮವನ್ನು ಎಂಆರ್‌ಪಿಎಲ್‌ನ ನಿವೃತ್ತ ಜನರಲ್ ಮ್ಯಾನೇಜರ್ ವೀಣಾ ಟಿ. ಶೆಟ್ಟಿ ಇವರು ಶಿಬಿರದ ಶೀರ್ಷಿಕೆಯನ್ನು ವಿಶಿಷ್ಟ ರೀತಿಯಲ್ಲಿ ಅನಾವರಣ ಮಾಡುವುದರ ಮೂಲಕ ಉದ್ಘಾಟನೆಗೊಳಿಸಿದರು.


ಬಳಿಕ ಅವರು ಮಾತನಾಡಿ, ನಾವು ಬಾಲ್ಯದಲ್ಲಿ ತುಂಬಾ ದೂರ ನಡೆದುಕೊಂಡು ಶಾಲೆಗೆ ಹೋಗುತ್ತಿದ್ದೇವು. ಮಳೆಗಾಲ, ಬೇಸಿಗೆ ಕಾಲದಲ್ಲಿಯೂ ಯಾವುದೇ ವ್ಯತ್ಯಾಸವಿಲ್ಲದೆ ನಡೆಯುತ್ತಿದ್ದೆವು. ಪ್ರಕೃತಿಯಲ್ಲಿ ಸಿಗುತ್ತಿದ್ದ ಎಲ್ಲಾ ಹಣ್ಣುಗಳನ್ನು ತಿನ್ನುತ್ತಾ ಶಾಲೆಗೆ ಸಮಯಕ್ಕೆ ಸರಿಯಾಗಿ ತಲುಪುತ್ತಿದ್ದೆವು. ಅದೊಂದು ನಮಗೆ ವಿಶೇಷವಾಗಿ ಸಿಗುತ್ತಿದ್ದ ಪ್ರಾಕೃತಿಕ ಜ್ಞಾನವಾಗಿತ್ತು ಎಂದು ಹೇಳಿದರು.


ಶಾಲೆಯ ಪಠ್ಯದ ಜೊತೆ ಇಂತಹ ಜ್ಞಾನವನ್ನು ಸಂಪಾದಿಸಲು ನಮಗೆ ಅವಕಾಶಗಳು ಲಭಿಸುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ ಪಟ್ಟಣ ಪ್ರದೇಶದಲ್ಲಿ ವಾಸ ಮಾಡುತ್ತಿರುವ ನಮಗೆಲ್ಲ ಇಂತಹ ಅವಕಾಶಗಳು ಕಾಣಲಿಕ್ಕೆ ಸಿಗುತ್ತಿಲ್ಲ. ಇದಕ್ಕೋಸ್ಕರ ನಾವೆಲ್ಲರೂ ನಮ್ಮ ತಂದೆ ತಾಯಿಯರು ಹುಟ್ಟಿರುವ ಹಳ್ಳಿಗೆ ಭೇಟಿ ಕೊಟ್ಟು ಅಲ್ಲಿನ ವಾಸ್ತವಿಕ ಸ್ಥಿತಿಯನ್ನು ತಿಳಿದುಕೊಂಡು ಅದನ್ನು ಆನಂದಿಸಬೇಕೆಂದು ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಕಿವಿ ಮಾತು ಹೇಳಿದರು. 


ಶಕ್ತಿ ಶಿಕ್ಷಣ ಸಂಸ್ಥೆ ಕೊಡುತ್ತಿರುವ ಈ ಬೇಸಿಗೆ ಶಿಬಿರದಲ್ಲಿ ಇಂತಹ ಎಲ್ಲಾ ಅನುಭವಗಳು ಸಿಗುವ ಸಾಧ್ಯತೆಯಿದೆ ಎಂದು ನಾನು ಭಾವಿಸುತ್ತೇನೆ ಎಂದರು.


ಶಕ್ತಿ ವಸತಿ ಶಾಲೆಯ ಮುಖ್ಯ ಸಲಹೆಗಾರ ರಮೇಶ್ ಕೆ. ಮಾತನಾಡಿ, ನಮ್ಮ ಶಕ್ತಿ ಶಾಲೆಯ ಶಿಕ್ಷಣವು ಮಕ್ಕಳಿಗೆ ಭಾರತದ ಸಂಸ್ಕೃತಿ ಪರಂಪರೆಯನ್ನು ಪರಿಚಯಿಸುತ್ತಾ ಮಕ್ಕಳನ್ನು ಸಂಸ್ಕಾರಭರಿತರನ್ನಾಗಿಸುವ ನಿಟ್ಟಿನಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ ಎಂದರು. 


ಶಕ್ತಿ ವಸತಿ ಶಾಲೆಯ ತರಗತಿ 6 ಮತ್ತು 7 ರ ಸಂಯೋಜಕಿ ಚೇತನಾ ತಲಪಾಡಿ ಅವರು ನೆರೆದಿರುವ ಎಲ್ಲರಿಗೂ ಶಿಬಿರದಲ್ಲಿ ನಡೆಯಲ್ಪಡುವ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. 


ಶಕ್ತಿ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ.ಸಿ. ನಾಕ್, ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ್ ಮೂರ್ತಿ ಹಾಗೂ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್ ಉಪಸ್ಥಿತರಿದ್ದರು. 


ಶಕ್ತಿ ವಸತಿ ಶಾಲೆಯ ಶಿಕ್ಷಕಿ ಸಹನಾ ಸ್ವಾಗತಿಸಿದರು. ಶಕ್ತಿ ವಸತಿ ಶಾಲೆಯ ಶಿಕ್ಷಕಿ ಭವ್ಯಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು. ಬೇಸಿಗೆ ಶಿಬಿರದಲ್ಲಿ ನಗರದ ಸುಮಾರು 75ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ನೋಂದಾಯಿಸಿಕೊಂಡು ಈ ಶಿಬಿರದಲ್ಲಿ ಭಾಗವಹಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article