
ನವೋದಯ ಸದಸ್ಯರಿಗೆ ಸಮವಸ್ತ್ರ ವಿತರಣೆ
Monday, April 21, 2025
ಮಂಗಳೂರು: ಮೇ.10 ರಂದು ನವೋದಯ ಸ್ವಸಹಾಯ ಸಂಘಗಳ ರಜತ ಮಹೋತ್ಸವ ಸಮಾರಂಭ ಡಾ. ಎಂ.ಎನ್. ರಾಜೇಂದ್ರಕುಮಾರ್ ಅವರ ನೇತೃತ್ವದಲ್ಲಿ ನಡೆಯಲಿದ್ದು, ಆ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಕಾಟಿಪಳ್ಳ ಶಾಖೆಯಲ್ಲಿ ನವೋದಯ ಸ್ವಸಹಾಯ ಸಂಘಗಳ ಗುಂಪಿನ ಸದಸ್ಯರಿಗೆ ಸಮವಸ್ತ್ರ ವಿತರಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ ವಿತರಿಸಿದರು. ಎಸ್‌ಡಿಸಿಸಿ ಬ್ಯಾಂಕ್ ಕಾಟಿಪಳ್ಳ ಶಾಖೆಯ ಶಾಖಾ ವ್ಯವಸ್ಥಾಪಕ ಕೇಸರಿ ಮನೋಹರ ಶೆಟ್ಟಿ, ಶಾಖ ಉಪ ವ್ಯವಸ್ಥಾಪಕಿ ಶರ್ಮಿಳ ಶೆಟ್ಟಿ, ಎಸ್‌ಡಿಸಿಸಿ ಬ್ಯಾಂಕ್‌ನ ಸೇಲ್ ಅಪೀಸರ್ ಪದ್ಮನಾಭ, ಕಾಟಿಪಳ್ಳ ಬ್ಯಾಂಕ್‌ನ ಸಿಬ್ಬಂದಿಗಳು, ಸ್ವಸಹಾಯ ಸಂಘಗಳ ಮೇಲ್ವಿಚಾರಕ ಪ್ರವೀಣ್ ಅಚಾರ್ಯ ಉಪಸ್ಥಿತರಿದ್ದರು.