
ರಾಮೋತ್ಸವ ಪ್ರಯುಕ್ತ ಗೋಪೂಜೆ
Sunday, April 6, 2025
ಮಂಗಳೂರು: ಏ.6 ರಂದು ಕದ್ರಿ ವಿಶ್ವ ಶ್ರೀ ಕಾರ್ಯಾಲಯದಲ್ಲಿ 24ನೇ ವರ್ಷದ ರಾಮೋತ್ಸವ ಕಾರ್ಯಕ್ರಮ ದ್ವಜಾರೋಹಣ ಮತ್ತು ಗೋಪೂಜೆ ನಡೆಯಿತು.
ರಾಷ್ಟ್ರೀಯ ಸ್ವಯಂ ಸೇವಕಸಂಘದ ಪ್ರಾಂತಸಹ ಕಾರ್ಯವಾಹ ಪ್ರಕಾಶ್ ಪಿ.ಎಸ್. ದ್ವಜಾರೋಹಣ ಮಾಡಿದರು. ವಿಶ್ವ ಹಿಂದೂ ಪರಿಷದ್ ಪ್ರಾಂತ ಕಾರ್ಯಾಧ್ಯಕ್ಷ ಡಾ. ಎಂ.ಬಿ. ಪುರಾಣಿಕ್, ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ, ವಿಭಾಗ ಕಾರ್ಯದರ್ಶಿ ಶಿವಾನಂದ್ ಮೆಂಡನ್ ಉಪಸ್ಥಿತರಿದ್ದರು.
ವೇ.ಮೂ. ಗಿರಿಧರ್ ಭಟ್ ಇವರ ಪೌರೋಹಿತ್ಯದಲ್ಲಿ ಗಣಪತಿ ಹೋಮದೊಂದಿಗೆ, ಶ್ರೀ ರಾಮ ಸೀತಾ ಮಾತೆ, ಲಕ್ಷ್ಮಣ ಸಹಿತ ಆಂಜನೇಯ ದೇವರ ಪ್ರತಿಷ್ಠೆಯೊಂದಿಗೆ ಪ್ರಾರಂಭಗೊಂಡು ವಿವಿಧ ವಿಧಿ ವಿಧಾನಗಳೊಂದಿಗೆ ಪೂಜಾಕಾರ್ಯಗಳು ನಡೆಯಿತು.