
ಶಕ್ತಿ ಪದವಿ ಪೂರ್ವ ಕಾಲೇಜಿಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ನಾಲ್ಕು ರ‍್ಯಾಂಕ್
ಮಂಗಳೂರು: ಶಕ್ತಿ ನಗರದ ಶಕ್ತಿ ಪಪೂ ಕಾಲೇಜಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ವಾಣಿಜ್ಯ ವಿಭಾಗದ ರಿಚಾ ಗಣೇಶ್ ದಲ್ವಿ 595 ಅಂಕವನ್ನು ಪಡೆಯುವುದರ ಮೂಲಕ 5ನೇ ರ‍್ಯಾಂಕ್, ನೈದಿಲೆ 592 ಅಂಕ ಪಡೆದು 7ನೇ ರ‍್ಯಾಂಕ್ ಹಾಗೂ ವಿಜ್ಞಾನ ವಿಭಾಗದ ಸ್ಟೀವ್ ಜೆಫ್ ಲೋಬೊ 591 ಅಂಕ ಪಡೆದು 9ನೇ ರ‍್ಯಾಂಕ್, ಅಶ್ವತ್ ಅಜಿತ್ ಪೈ 590 ಅಂಕ ಪಡೆದು 10ನೇ ರ‍್ಯಾಂಕ್ ಪಡೆದಿರುತ್ತಾರೆ.
ವಿಜ್ಞಾನ ವಿಭಾಗದಲ್ಲಿ 66 ವಿದ್ಯಾರ್ಥಿಗಳು ಹಾಗೂ ವಾಣಿಜ್ಯ ವಿಭಾಗದಲ್ಲಿ 18 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ. 117 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 11 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.
ವಿಜ್ಞಾನ ವಿಭಾಗದ ಪಿಸಿಎಮ್‌ಸಿಯಲ್ಲಿ ಸ್ಟೀವ್ ಜೆಫ್ ಲೋಬೊ 591, ಪಿಸಿಎಂಬಿ-ಅಶ್ವತ್ ಅಜಿತ್ ಪೈ 590, ಪಿಸಿಎಮ್‌ಸಿ -ವರ್ಷಿಣಿ ಡಿ ಎನ್ 583, ಪಿಸಿಎಮ್‌ಸಿ-ರಕ್ಷಾ ಎಲ್. ಪೈ 582, ಪಿಸಿಎಂಬಿ-ಸಮುದ್ಯಾತಾ 580, ಪಿಸಿಎಂಬಿ-ಅಭಿಜ್ಞಾ 580, ಪಿಸಿಎಂಬಿ-ನಾಗವರ್ಷಿಣಿ ಕೆ.ಆರ್. 578, ಪಿಸಿಎಮ್‌ಸಿ-ಪದ್ಮಾವತಿ ಜಿ.ಆರ್ 577, ಪಿಸಿಎಮ್‌ಸಿ-ಅನಘ ವಿ. ಭಟ್ 577, ಪಿಸಿಎಮ್‌ಸಿ-ಅರಿಕ್ತ ಸಿ.ಆರ್. 576 ಅಂಕ ಗಳಿಸಿರುತ್ತಾರೆ.
ವಾಣಿಜ್ಯ ವಿಭಾಗದ ಇಬಿಎಎಸ್‌ಯಲ್ಲಿ ರಿಚಾ ಗಣೇಶ್ ದಲ್ವಿ 595, ಇಬಿಎಸಿ-ನೈದಿಲೆ 592, ಇಬಿಎಸಿ-ಜೀವನ್ ಎಲ್. ಕಮ್ಟಿ 581 ಅಂಕ ಗಳಿಸಿರುತ್ತಾರೆ.
ಬಹಳಷ್ಟು ವಿದ್ಯಾರ್ಥಿಗಳು 100ಕ್ಕೆ 100 ಅಂಕ ಪಡೆದು ಉತ್ತಮ ಅಂಕಗಳೊಂದಿಗೆ ತೇರ್ಗಡೆಗೊಂಡಿರುತ್ತಾರೆ. ಕನ್ನಡದಲ್ಲಿ ಕರುಣ ವಿ. ಹಿರೆಗೌಡರ್, ಸಿರಿ ಕೊಲಿ, ಕೌಶಿಕ್ ವಿ.ಎಂ. 100 ಅಂಕ ಪಡೆದಿರುತ್ತಾರೆ. ಸಂಸ್ಕೃತದಲ್ಲಿ ವರ್ಷಿಣಿ ಡಿ.ಎನ್. ಅಬಿಜ್ಞಾ, ಸಾನ್ವಿ ಅಗರಿ ಹರಿಕಿಶೋರ್, ಹರ್ಷಿತ್ ಆರ್ ಸುವರ್ಣ, ಲಹರಿ ಶೆಟ್ಟಿ, ಕುಶಿ ಎ. ಪೂಜಾರಿ, ಸಿಂಚನಾ ಎಮ್, ಕೌಶಿಕ್ 100 ಅಂಕ ಪಡೆದಿರುತ್ತಾರೆ.
ರಾಸಾಯನ ಶಾಸ್ತ್ರದಲ್ಲಿ ಅಶ್ವತ್ ಅಜೀತ್ ಪೈ ಮತ್ತು ಕರುಣ ವಿ. ಹಿರೆಗೌಡರ್ 100 ಅಂಕ ಪಡೆದಿರುತ್ತಾರೆ. ಗಣಿತಶಾಸ್ತ್ರದಲ್ಲಿ ರಕ್ಷಾ ಎಲ್. ಪೈ, ಸಮುದ್ಯತಾ ಮತ್ತು ಪದ್ಮಾವತಿ 100 ಅಂಕ ಪಡೆದಿರುತ್ತಾರೆ. ಜೀವಶಾಸ್ತ್ರದಲ್ಲಿ ಅಶ್ವತ್ ಅಜಿತ್ ಪೈ 100 ಅಂಕ ಪಡೆದಿರುತ್ತಾರೆ. ಗಣಕ ವಿಜ್ಞಾನದಲ್ಲಿ ಸ್ಟೀವ್ ಜೆಫ್ ಲೋಬೊ ಮತ್ತು ಪದ್ಮಾವತಿ 100 ಅಂಕ ಪಡೆದಿರುತ್ತಾರೆ.
ವಾಣಿಜ್ಯ ವಿಭಾಗದಲ್ಲಿ 100 ಅಂಕಗಳನ್ನು ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ, ಲೆಕ್ಕ ಶಾಸ್ತ್ರದಲ್ಲಿ ರಿಚಾ ಗಣೇಶ್ ದಲ್ವಿ ಪಡೆದಿದ್ದು, ಅರ್ಥಶಾಸ್ತ್ರ ಮತ್ತು ವ್ಯವಹಾರ ಅಧ್ಯಯನದಲ್ಲಿ ನೈದಿಲೆ, ವ್ಯವಹಾರ ಅಧ್ಯಯನದಲ್ಲಿ ಶಿವಕುಮಾರ್, ಸಂಖ್ಯಾಶಾಸ್ತ್ರದಲ್ಲಿ ಅಭಯ್ ಸೂರ್ಯ ಮತ್ತು ಕೋಮಲ್ 100 ಅಂಕ ಪಡೆದಿರುತ್ತಾರೆ.
ಶಕ್ತಿ ಪಪೂ ಕಾಲೇಜು ತನ್ನ ಆರನೇ ವರ್ಷದ ಫಲಿತಾಂಶದಲ್ಲಿ ಸತತ ಮೂರನೇ ಬಾರಿಗೆ ವಾಣಿಜ್ಯ ವಿಭಾಗದಲ್ಲಿ ಹಾಗೂ ವಿಜ್ಞಾನ ವಿಭಾಗದಲ್ಲಿ ಎರಡನೇ ಬಾರಿಗೆ ರ‍್ಯಾಂಕ್ ಗಳಿಸಿ ಅತ್ಯುತ್ತಮ ಸಾಧನೆ ತೋರಿರುವುದನ್ನು ಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ.ಸಿ. ನಾಕ್ ಅಭಿನಂದಿಸಿದ್ದಾರೆ.
ಸಂಸ್ಥೆಯ ಕಾರ್ಯದರ್ಶಿ ಸಂಜೀತ್ ನಾಕ್, ಪ್ರಧಾನ ಸಲಹೆಗಾರ ರಮೇಶ ಕೆ., ಶಕ್ತಿ ಪಪೂ ಕಾಲೇಜು ಪ್ರಾಂಶುಪಾಲ ವೆಂಕಟೇಶ ಮೂರ್ತಿ ಎಚ್., ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲೆ ಬಬಿತಾ ಸೂರಜ್ ವಿದ್ಯಾರ್ಥಿಗಳನ್ನು ಹಾಗೂ ಉಪನ್ಯಾಸಕರನ್ನು ಅಭಿನಂದಿಸಿದ್ದಾರೆ.