ಯುವಜನರನ್ನು ಜನಪರ ಚಿಂತನೆಗೆ ಹಚ್ಚುವ ಯುವಕ ಮಂಡಲದ ಕೆಲಸ ಈ ಸಮಾಜಕ್ಕೆ ಮಾದರಿ: ರೆ.ಫಾ. ಆಂಡ್ರ್ಯೂ ಡಿಸೋಜ

ಯುವಜನರನ್ನು ಜನಪರ ಚಿಂತನೆಗೆ ಹಚ್ಚುವ ಯುವಕ ಮಂಡಲದ ಕೆಲಸ ಈ ಸಮಾಜಕ್ಕೆ ಮಾದರಿ: ರೆ.ಫಾ. ಆಂಡ್ರ್ಯೂ ಡಿಸೋಜ


ಮಂಗಳೂರು: ಬಜಾಲ್‌ನ ಪಕ್ಕಲಡ್ಕ ಯುವಕ ಮಂಡಲದ ಸದಸ್ಯರು ಸಮಾಜದ ಒಳಿತಿಗೆ ನಡೆಸುವ ಚಟುವಟಿಕೆಗಳು ಬೇರೆಲ್ಲೂ ಕಾಣ ಸಿಗುವುದು ಅತಿ ವಿರಳ. ನಾನು ಕಂಡಂತೆ ಈ ಸಂಸ್ಥೆಗಳು ಕೇವಲ ಸಮಾಜ ಸೇವೆ ಮಾತ್ರವಲ್ಲ ಯುವಜನರನ್ನು ಜನಪರ ಚಿಂತನೆಗೆ ಹಚ್ಚಿಕೊಳ್ಳುವಂತೆ ತಯಾರುಗೊಳಿಸುತ್ತಿರುವುದು ಬಹಳ ವಿಶೇಷ. ಇಂತಹ ಬೆಳವಣಿಗೆಗಳೇ ಸಮಾಜದ ಒಳಿತಿಗೆ ಕೊಡುಗೆ ಕೊಡುವಂತದ್ದು, ಈ ರೀತಿಯ ಮಾದರಿ ಕೆಲಸಗಳನ್ನು ಇತರೆ ಸಂಸ್ಥೆಗಳು ಅನುಸರಿಸಬೇಕಾಗಿದೆ ಎಂದು ಬಜಾಲ್ ಹೋಲಿ ಸ್ಪಿರೀಟ್ ಚರ್ಚ್‌ನ ಧರ್ಮಗುರು ರೆ.ಫಾ ಆಂಡ್ರ್ಯೂ ಡಿಸೋಜ ಹೇಳಿದರು.


ಅವರು ಏ.26 ರಂದು ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪಕ್ಕಲಡ್ಕ ಯುವಕ ಮಂಡಲ (ರಿ) ಇದರ 73ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಭಾ, ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಜಿಲ್ಲೆಯ ಹಲವು ಕಡೆಗಳಲ್ಲಿರುವ ಯುವಕ ಮಂಡಲಗಳನ್ನು ಗಮನಿಸಿದ್ದೇನೆ ಆದರೆ ಇಷ್ಟೊಂದು ಹಿರಿಯ ಮತ್ತು ಸ್ಪಷ್ಟ ಗುರಿಗಳನ್ನು ಹೊಂದಿ ಕಾರ್ಯಚರಿಸುತ್ತಿರುವ ಪಕ್ಕಲಡ್ಕದಂತಹ ಯುವಕ ಮಂಡಲವನ್ನು ನಾನೆಲ್ಲೂ ಕಂಡಿಲ್ಲ. ಸಮಾಜಕ್ಕೆ ತಮ್ಮಿಂದಾದ ಕೊಡುಗೆಗಳನ್ನು ನೀಡುವ ಕೆಲಸಗಳನ್ನು ಹೆಚ್ಚಿಸಿಕೊಂಡಿದ್ದಾರೆಯೇ ಹೊರತು ಹಿಮ್ಮುಖವಾಗಿ ಚಲಿಸಿಲ್ಲ. ಕಳೆದ ಎರಡು ವರುಷಗಳಿಂದ ಅನಾರೋಗ್ಯ ಪೀಡಿತರಿಗೆ ಉಚಿತ ಆಂಬ್ಯುಲೆನ್ಸ್ ಮೂಲಕ ನೀಡುವ ಸೇವೆಯೇ ಅದಕ್ಕೊಂದು ಉದಾಹರಣೆ. ಊರಿನ ಪ್ರೀತಿ ಸೌಹಾರ್ದತೆಗೆ ಕೊಂಡಿಯಾಗಿರುವ ಪಕ್ಕಲಡ್ಕ ಯುವಕ ಮಂಡಲದಂತಹ ಸಂಘ ಸಂಸ್ಥೆಗಳನ್ನು ಬೆಳೆಸಿ ಉಳಿಸುವಂತಹ ಹೊಣೆಗಾರಿಕೆ ಈ ಸಮಾಜಕ್ಕೂ ಇದೆ ಇಂತಹ ಯುವಕರ ಸಂಖ್ಯೆ ಹೆಚ್ಚಳಗೊಳ್ಳಲಿ ಎಂದು ಹಾರೈಸಿದರು.


ಸಮಾರಂಭದ ಅಧ್ಯಕ್ಷತೆಯನ್ನು ಪಕ್ಕಲಡ್ಕ ಯುವಕ ಮಂಡಲದ ಅಧ್ಯಕ್ಷ ದೀಕ್ಷಿತ್ ಭಂಡಾರಿ ವಹಿಸಿದ್ದರು.

ಕಾರ್ಮಿಕ ಮುಖಂಡ ಸುನೀಲ್ ಕುಮಾರ್ ಬಜಾಲ್, ಮಾಜಿ ಕಾರ್ಪೊರೇಟರ್ ಪ್ರವೀಣ್ ಚಂದ್ರ ಆಳ್ವ, ಜಿಲ್ಲಾ ಧಾರ್ಮಿಕ ಪರಿಷತ್ತು ಸದಸ್ಯರಾದ ಚಂದ್ರಕಲಾ ಡಿ. ರಾವ್, ಸತೀಶ್ ಕುಮಾರ್ ಬಜಾಲ್, ಪರಿವರ್ತನಾ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣಾನಂದ, ಯುವಜನ ಮುಖಂಡ ಬಿ.ಕೆ. ಇಮ್ತಿಯಾಜ್ ಮಾತನಾಡಿದರು.

ವೇದಿಕೆಯಲ್ಲಿ ಕಮಲಾಕ್ಷ ಶೆಟ್ಟಿ ಬಜಾಲ್, ಯುವ ಉದ್ಯಮಿ ಸಿರಾಜ್ ಮಂಜೇಶ್ವರ, ಶೈಲೇಶ್ ಶೆಟ್ಟಿ, ಸಂತೋಷ್ ಬಜಾಲ್, ಜನತಾ ವ್ಯಾಯಾಮ ಶಾಲೆಯ ಅಧ್ಯಕ್ಷ ದೀಪಕ್ ಬಜಾಲ್, ಜಪ್ಪಿನಮೊಗರು ಗ್ರಾಮ ಯುವಕ ಮಂಡಲದ ಅಧ್ಯಕ್ಷ ದಿನೇಶ್ ಶೆಟ್ಟಿ ಉಪಸ್ಥಿತರಿದ್ದರು. 

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ್ದ ಪ್ರಕಾಶ್ ಶೆಟ್ಟಿ, ರಾಮಚಂದ್ರ ಆಳ್ವ, ಸಂತೋಷ್ ಪಲ್ಲಕೆರೆ ಅವರುಗಳನ್ನು ಅಭಿನಂದಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ಪಕ್ಕಲಡ್ಕ ಯುವಕ ಮಂಡಲದ ತಂಡಗಳಿಂದ ನೃತ್ಯಪ್ರದರ್ಶನ ಹಾಗೂ ಅಷ್ಟಮಿ ಎಂಬ ತುಳು ಸಂಸಾರಿಕ ನಾಟಕ ಪ್ರದರ್ಶನಗೊಂಡವು. 

ಪಕ್ಕಲಡ್ಕ ಯುವಕ ಮಂಡಲ ಮುಖಂಡರಾದ ಜಗದೀಶ್ ಬಜಾಲ್ ಸ್ವಾಗತಿಸಿ, ದೀರಾಜ್ ಬಜಾಲ್ ವಂದಿಸಿದರು. ನಾಗರಾಜ್ ಬಜಾಲ್ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article