ರೂಪಶ್ರೀ ಶೆಣೈ ಅವರಿಗೆ ಪಿಎಚ್‌ಡಿ ಪದವಿ

ರೂಪಶ್ರೀ ಶೆಣೈ ಅವರಿಗೆ ಪಿಎಚ್‌ಡಿ ಪದವಿ


ಮಂಗಳೂರು: ವೈದ್ಯಕೀಯ ಶಿಕ್ಷಣದಲ್ಲಿ ಸಲ್ಲಿಸಿದ ಸಂಶೋಧನಾ ಪ್ರಬಂಧಕ್ಕೆ ರೂಪಶ್ರೀ ಶೆಣೈ ಅವರಿಗೆ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ.

‘ಶರೀರಶಾಸ್ತ್ರ ಎಂಬಿಬಿಎಸ್ ಪಠ್ಯಕ್ರಮದಲ್ಲಿ ಕಾರ್ಯ ಆಧಾರಿತ ಕಲಿಕೆ (ಟಿಬಿಎಲ್) ಅನುಷ್ಠಾನ ಮತ್ತು ಮೌಲ್ಯಮಾಪನ’ ವಿಷಯಲ್ಲಿ ರೂಪಶ್ರೀ ಶೆಣೈ ಅವರು ಸಂಶೋಧನೆ ನಡೆಸಿದ್ದರು. ಸಮುದಾಯ ಔಷಧ ವಿಭಾಗದ ಪ್ರಾಧ್ಯಾಪಕ ಡಾ. ಅನಿಮೇಶ್ ಜೈನ್ ಮಾರ್ಗದರ್ಶನ ನೀಡಿದ್ದರು. 

ರೂಪಶ್ರೀ ಶೆಣೈ ಅವರು ಗೋಪಾಲಕೃಷ್ಣ ಮಲ್ಯ ಮತ್ತು ನಳಿನಿ ಮಲ್ಯ ದಂಪತಿ ಪುತ್ರಿ. ಅವರು ಉಡುಪಿಯ ಸೇಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ಹಳೇ ವಿದ್ಯಾರ್ಥಿ ಮತ್ತು ಮಹಾತ್ಮ ಗಾಂಧಿ ಸ್ಮಾರಕ (ಎಂಜಿಎಂ) ಕಾಲೇಜಿನ ಪದವೀಧರರಾಗಿದ್ದಾರೆ. 

ಅವರು 2014ರಲ್ಲಿ ಮಣಿಪಾಲ್‌ನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಿಂದ ವೈದ್ಯಕೀಯ ಶರೀರಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದರು. ಮಂಗಳೂರಿನ ಮುಕುಂದ್ ಎಂಜಿಎಂ ರಿಯಾಲ್ಟಿ ಮತ್ತು ವರ್ಟೆಕ್ಸ್ ವರ್ಕ್‌ಸ್ಪೇಸ್‌ನಲ್ಲಿ ವ್ಯವಸ್ಥಾಪಕ ಪಾಲುದಾರ ಮತ್ತು ಸಹ-ಸಂಸ್ಥಾಪಕ ಗುರುದತ್ ಶೆಣೈ ಅವರ ಪತ್ನಿ. 

ವೈದ್ಯಕೀಯ ಶರೀರಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕಿಯಾಗಿದ್ದ ಅವರು ಪ್ರಸ್ತುತ ಮಂಗಳೂರು ಮಣ್ಣಗುಡ್ಡ ಗಾಂಧಿ ಪಾರ್ಕ್ ಬಳಿಯ ವರ್ಟೆಕ್ಸ್ ಲಾಂಜ್‌ನಲ್ಲಿರುವ ಪೇಪರ್ ರಾಕೆಟ್ ಬುಕ್ ಸ್ಟೋರ್‌ನ ಮಾಲಕಿ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article