ಮೂಡುಬಿದಿರೆ ಆಳ್ವಾಸ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಮನದಾಳದ ಮಾತು

ಮೂಡುಬಿದಿರೆ ಆಳ್ವಾಸ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಮನದಾಳದ ಮಾತು

ಬಿಂದು ನವಲೆ ರಾಜ್ಯಕ್ಕೆ ಟಾಪರ್

ಮೂಡುಬಿದಿರೆ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಬಿಂದು ನವಲೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯವರು. ಕಲ್ಯಾಣ್ ಕುಮಾರ್ ಜ್ಯೋತಿ ದಂಪತಿಯ ಪುತ್ರಿ. ತಂದೆ ಕುಶನ್ ವರ್ಕ್ ಮಾಡುತ್ತಿದ್ದಾರೆ. ತಾಯಿ ಜ್ಯೋತಿ ಗೃಹಿಣಿ. ರಾಜ್ಯಕ್ಕೆ ಎರಡನೇ ಟಾಪರ್ ಆಗಿರುವುದಕ್ಕೆ ಖುಷಿಯಾಗಿದೆ. ನಿರೀಕ್ಷಿತ ಅಂಕ ಲಭಿಸಿದೆ. ಮುಂದೆ ಸಿಇಟಿ, ಜೆಇಇ ಯಲ್ಲಿ ಉತ್ತಮ ಅಂಕ ಪಡೆದು ಇಂಜಿನಿಯರಿಂಗ್ ಪ್ರವೇಶ ಪಡೆಯುವ ಗುರಿ ಇಟ್ಟುಕೊಂಡಿದ್ದಾರೆ. 

*

ವೈದ್ಯನಾಗುವ ಕನಸು: ರಾಜ ಯದು ಯಾದವ್

ಆಳ್ವಾಸ್ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದಿರುವ ರಾಜ ಯದು ಯಾದವ್ ತುಮಕೂರು ಜಿಲ್ಲೆ ಪಾವಗಡ ತಾಲೂಕು ಇಂದ್ರಬೆಟ್ಟ ಗ್ರಾಮದವರು. ನ್ಯಾಯವಾದಿ ಪ್ರಭುಲಿಂಗೇಗೌಡ, ಗೃಹಿಣಿ ಉಷಾ ದಂಪತಿಯ ಪುತ್ರ. ನಿರೀಕ್ಷಿತ ಅಂಕ ಲಭಿಸಿದೆ. ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಎಂಬಿಬಿಎಸ್ ಪದವಿ ಪಡೆದು ವೈದ್ಯನಾಗುವ ಗುರಿ ಇರಿಸಿಕೊಂಡಿದ್ದೇನೆ. ಕಾಲೇಜಿನಲ್ಲಿ ಉಪನ್ಯಾಸಕರ ಮತ್ತು ಪೋಷಕರ ಪ್ರೋತ್ಸಾಹವೇ ಈ ಸಾಧನೆಗೆ ಕಾರಣ.

*

ವಿಜೇತ್ ಗೌಡ ಎಂಬಿಬಿಎಸ್ ಗುರಿ

ಆಳ್ವಾಸ್ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿರುವ ವಿಜೇತ್ ಗೌಡ ಎಂಬಿಬಿಎಸ್ ಪದವಿ ಪಡೆದು ವೈದ್ಯನಾಗುವ ಗುರಿ ಇರಿಸಿಕೊಂಡಿದ್ದಾರೆ. ಹೊನ್ನಾವರ ತಾಲೂಕು ಕೆಳಗಿನೂರು ಗ್ರಾಮದ ನಾಜಿಗಾರದ ಶಿಕ್ಷಕ ದಂಪತಿಯದ ಗಣೇಶ್ ಕೆ. ಗೌಡ, ರೇಖಾ ಶಿಕ್ಷಕ ದಂಪತಿಯ ಪುತ್ರ. 

ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದು ಉತ್ತಮ ಅಂಕಗಳಿಸುವ ನಿರೀಕ್ಷೆಯಿದೆ. ಮೊದಲ ಸ್ಥಾನದ ನಿರೀಕ್ಷೆಯಿದ್ದರೂ ಇಂಟರ್‌ನಲ್‌ನಲ್ಲಿ ಒಂದು ಮಾರ್ಕ್ ಕಡಿಮೆ ಬಂದಿರುವುದರಿಂದ ಮೊದಲ ಸ್ಥಾನ ತಪ್ಪಿದೆ ಎಂದು ಬೇಸರಿಸಿದರು.

*

ಜೆಇಇ ಮೈನ್ಸ್ನಲ್ಲೂ ಅಕ್ಷಯ್ ಎಂ. ಹೆಗ್ಡೆ ಸಾಧನೆ

ವಿಜ್ಞಾನ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿರುವ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ಅಕ್ಷಯ್ ಎಂ. ಹೆಗ್ಡೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಮಧುಕೇಶ್ವರ ಎಸ್ ಹೆಗ್ಡೆ-ಶಾಂತಲಾ ಎಂ. ಹೆಗ್ಡೆ ದಂಪತಿಯ ಪುತ್ರ. ತಂದೆ ಉಪನ್ಯಾಸಕ, ತಾಯಿ ಗೃಹಿಣಿ. ಜೆಇಇ ಮೈನ್ಸ್‌ನಲ್ಲಿ ೯೯.೮೮ ಪರ್ಸೆಂಟೈಲ್ ಲಭಿಸಿತ್ತು. ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದು ಉತ್ತಮ ಅಂಕ ಲಭಿಸಿದರೆ ವೈದ್ಯಕೀಯ ಪ್ರವೇಶ ಪಡೆಯುವುದು ಅಥವಾ ಇಂಜಿನಿಯರಿಂಗ್ ಆದ್ಯತೆ ಮುಂದಿನ ಗುರಿ ಎನ್ನುತ್ತಾರೆ ಅಕ್ಷಯ್ ಎಂ. ಹೆಗ್ಡೆ.

*

ಪ್ರಣಯ್ 

ಬೆಳಗಾವಿ ಜಿಲ್ಲೆಯ ಬಾಲ ಸಾಹೇಬ್ ಗೌಡ-ಸೀಮಾ ದಂಪತಿಯ ಪುತ್ರನಾಗಿರುವ ಪ್ರಣಯ್ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ ೧೦ ನೇ ತರಗತಿಯವರೆಗೆ ವ್ಯಾಸಂಗ ಮಾಡಿದ್ದು, ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನಿಯಾಗಿದ್ದಾನೆ. ಹೆತ್ತವರು, ಶಿಕ್ಷಕರ ನಿರಂತರ ಪ್ರೋತ್ಸಾಹ, ಮಾರ್ಗದರ್ಶನದಿಂದ ಹೆಚ್ಚು ಅಂಕ ಗಳಿಸಲು ಸಾಧ್ಯವಾಗಿದೆ. ಮುಂದೆ ಸಿಎ ಆಗುವಾಸೆ ಎಂದು ತಿಳಿಸಿದ್ದಾರೆ. 

*

ವೈಷ್ಣವಿ ಪ್ರಸಾದ್ ಭಟ್‌ಗೆ ಸಿಎ ಆಗುವಾಸೆ

ಕಾರ್ಕಳ ತಾಲೂಕಿನ ಬೆಳ್ಮಣ್‌ನ ಪ್ರಸಾದ್ ಭಟ್-ಶ್ರೀ ವಿದ್ಯಾ ಭಟ್ ದಂಪತಿಯ ಪುತ್ರಿಯಾಗಿರುವ ವೈಷ್ಣವಿ ಪ್ರಸಾದ್ ಭಟ್ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ತೃತೀಯ ರ‍್ಯಾಂಕ್ ಪಡೆದಿದ್ದಾರೆ. ಸರಿಯಾದ ವೇಳಾಪಟ್ಟಿ ಮಾಡಿ ಅದಕ್ಕೆ ಅನುಗುಣವಾಗಿ ಅಧ್ಯಯನ ಮಾಡಿರುವುದರಿಂದ ನಿರೀಕ್ಷಿತ ಅಂಕ ಗಳಿಸಲು ಸಾಧ್ಯವಾಗಿದೆ. ಆಳ್ವಾಸ್‌ನಲ್ಲಿ ಕಲಿಕೆಗೆ ಪೂರಕ ವಾತಾವರಣವಿದೆ ಎನ್ನುವ ವೈಷ್ಣವಿಗೆ ಸಿಎ ಆಗುವಾಸೆ.

*

ಪ್ರೇಕ್ಷಾ ಎಂ.ಎಸ್.

ಮೈಸೂರಿನ ಸೋಮಪ್ಪ-ಸುನಂದಾ ದಂಪತಿಯ ಪುತ್ರಿಯಾಗಿರುವ ಪ್ರೇಕ್ಷಾ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ತೃತೀಯ ಸ್ಥಾನಿಯಾಗಿದ್ದಾರೆ. ತಮ್ಮ ಸಾಧನೆಯನ್ನು ತಂದೆ ತಾಯಿಗೆ ಅರ್ಪಿಸಿದ್ದಾರೆ. ಆಳ್ವಾಸ್ ಸಂಸ್ಥೆಯ ಅಧ್ಯಕ್ಷರು, ಶಿಕ್ಷಕರ ನಿರಂತರ ಪ್ರೋತ್ಸಾಹದಿಂದಾಗಿ ಸಾಧನೆ ಮಾಡಲು ಸಾಧ್ಯವಾಗಿದೆ. ಡಾ.ಮೋಹನ ಆಳ್ವರು ನನಗೆ ರೋಲ್ ಮಾಡೆಲ್. ಕಲಿಕಾ ಸಾಮಾಗ್ರಿಗಳು ಹೆಚ್ಚು ಅಂಕಗಳನ್ನು ಗಳಿಸಲು ಸಹಕಾರಿಯಾಗಿದೆ. ಮುಂದೆ ವೈದ್ಯೆಯಾಗುವಸೆ ಎಂದು ಅಭಿಪ್ರಾಯ ತಿಳಿಸಿದ್ದಾರೆ.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article