
ಜೈ ಭೀಮ್ ಯುವ ಸೇನೆಯಿಂದ ಮೂಡುಬಿದಿರೆಯಲ್ಲಿ ಬೈಕ್ ರ‍್ಯಾಲಿ, ಮೆರವಣಿಗೆ
Sunday, April 20, 2025
ಮೂಡುಬಿದಿರೆ: ಸುವರ್ಣ ಕರ್ನಾಟಕ ರಾಜ್ಯ ಸಮಿತಿ ಜೈ ಭೀಮ್ ಯುವ ಸೇನೆ ರಿ. ದ.ಕ.ಜಿಲ್ಲಾ ವತಿಯಿಂದ ಅಂಬೇಡ್ಕರ್ ಅವರ 134ನೇ ಜಯಂತಿ ಪ್ರಯುಕ್ತ ಮೂಡುಬಿದಿರೆಯಲ್ಲಿ ರವಿವಾರ ಬೈಕ್ ರ‍್ಯಾಲಿ ಮೆರವಣಿಗೆ ನಡೆಯಿತು.
ತಾಲೂಕು ಕಚೇರಿಯಿಂದ ಹೊರಟ ಬೈಕ್ ರ‍್ಯಾಲಿ ಮತ್ತು ಮೆರವಣಿಗೆಯು ಹಳೆ ಪೋಲಿಸ್ ಠಾಣೆ-ಜಿ.ವಿ.ಪೈ ಆಸ್ಪತ್ರೆ-ಅಮರಶ್ರೀ ಮೂಲಕ ಸಾಗಿ ಮತ್ತೆ ಆಡಳಿತ ಸೌಧದ ಮುಂಭಾಗದಲ್ಲಿ ಕೊನೆಗೊಂಡಿತು.
ಮೆರವಣಿಗೆಯಲ್ಲಿ ನಾಸಿಕ್ ಬ್ಯಾಂಡ್ ಮತ್ತು ಹುಲಿವೇಷದ ಕುಣಿತಗಳು ಗಮನ ಸೆಳೆಯಿತು.
ಸೇನೆಯ ರಾಜ್ಯಾಧ್ಯಕ್ಷ ವತೂ೯ರು ಮಂಜುನಾಥ್, ಜಿಲ್ಲಾ ಸಾಂಸ್ಕೃತಿಕ ಕಾಯ೯ದಶಿ೯ ನವೀನ್ ಚಿಂಗ, ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷ ಪ್ರವೀಣ್ ಎಸ್., ಉಪಾಧ್ಯಕ್ಷ ರಂಜಿತ್ ಕುಮಾರ್, ಸುಧೀರ್ ಮತ್ತು ಪ್ರಧಾನ ಕಾಯ೯ದಶಿ೯ ಚೇತನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.