
ದರೆಗುಡ್ಡೆ: ವ್ಯಕ್ತಿಗೆ ತಲವಾರಿನಿಂದ ಹಲ್ಲೆ
Monday, April 7, 2025
ಮೂಡುಬಿದಿರೆ: ದರೆಗುಡ್ಡೆಯಲ್ಲಿ ಶನಿವಾರ ಸಂಜೆ ವ್ಯಕ್ತಿಯೋವ೯ರಿಗೆ ತಲವಾರಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿಂದೂ ಜಾಗರಣ ವೇದಿಕೆಯ ಮುಖಂಡ ಸಮಿತ್ ರಾಜ್ ದರೆಗುಡ್ಡೆ ಅವರ ಸಹೋದರ ಸಂತೋಷ್ ಹಲ್ಲೆಗೊಳಗಾದ ವ್ಯಕ್ತಿ.
ದರೆಗುಡ್ಡೆ ಗ್ರಾಮದ ರಬ್ಬರ್ ತೋಟ ಎಂಬಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದ್ದು ಅದೇ ಪರಿಸರದ ಗಷೇಶ್ ಹಾಗೂ ಅಕ್ಷಿತ್ ಈ ಪ್ರಕರಣದ ಆರೋಪಿಗಳಾಗಿದ್ದಾರೆ.
ಸಂತೋಷ್ ಅವರು ಶನಿವಾರ ಸಂಜೆ ತನ್ನ ಆಕ್ಟಿವಾದಲ್ಲಿ ವಾಪಾಸು ಮನೆಗೆ ಬರುತ್ತಿರುವಾಗ ರಿಕ್ಷಾದಲ್ಲಿ ಬಂದ ಆರೋಪಿಗಳು ಅವರನ್ನು ಅಡ್ಡಗಟ್ಟಿ ತಲವಾರಿನಿಂದ ಹಲ್ಲೆ ನಡೆಸಿ ಕೊಲೆಯತ್ನ ನಡೆಸಿದ್ದಾರೆ. ಸಂತೋಷ್ ಅವರ ಕಾಲಿಗೆ ತಲವಾರು ಏಟು ಬಿದ್ದಿದ್ದು ಅವರನ್ನು ಕಾರ್ಕಳ ಸ್ಪಂದನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೂರ್ವಧ್ವೇಷವೇ ಹಲ್ಲೆಗೆ ಕಾರಣವೆನ್ನಲಾಗಿದೆ.ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ತನಿಖೆ ನಡೆಸುತ್ತಿದ್ದಾರೆ.