
ಕಾರು ಬೈಕ್‌ಗೆ ಢಿಕ್ಕಿ: ದಂಪತಿಗೆ ಗಾಯ
Saturday, May 31, 2025
ಬಂಟ್ವಾಳ: ಕಾರು ಢಿಕ್ಕಿಯಾಗಿ ಸ್ಕೂಟರಿನಲ್ಲಿ ಸಂಚರಿಸುತ್ತಿದ್ದ ಪತಿ-ಪತ್ನಿ ಗಾಯಗೊಂಡ ಘಟನೆ ಬಿ.ಸಿ. ರೋಡಿನ ಮುಖ್ಯ ವೃತ್ತದ ಬಳಿ ಸಂಭವಿಸಿದೆ.
ಪಾಣೆಮಂಗಳೂರು ಗ್ರಾಮದ ಕಲ್ಲಗುಡ್ಡೆ ನಿವಾಸಿಗಳಾದ ರತ್ನಾಕರ ಹಾಗೂ ಅವರ ಪತ್ನಿ ಲಿಖಿತಾ ದಂಪತಿ ಗಾಯಗೊಂಡಿದ್ದು, ಬಿ.ಸಿ. ರೋಡಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರು ಸ್ಕೂಟರಿನಲ್ಲಿ ಬಿ.ಸಿ. ರೋಡು ಮುಖ್ಯ ವೃತ್ತದಿಂದ ಬಂಟ್ವಾಳ ಕಡೆಗೆ ನಿಧಾನವಾಗಿ ಹೋಗುತ್ತಿರುವ ಸಂದರ್ಭ ಕಾರು ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.