
ಅರಂತೋಡಿನಲ್ಲಿ ಕಾಡಾನೆ ದಾಳಿ
Saturday, May 31, 2025
ಅರಂತೋಡು: ಕಾಡಾನೆಗಳ ಹಿಂಡು ಮರದ ಡಿಪೋದ ಆವರಣ ಗೋಡೆಗೆ ಹಾನಿ ಉಂಟು ಮಾಡಿದ ಘಟನೆ ಸುಳ್ಯ ಆಲೆಟ್ಟಿ ಗ್ರಾಮದ ಅರಂಬೂರಿನಲ್ಲಿ ಕಳೆದ ರಾತ್ರಿ ನಡೆದಿದೆ.
ಶುಕ್ರವಾರ ಬೆಳಗ್ಗಿನ ಸಮಯ ಕಾಡಾನೆಗಳ ಹಿಂಡು ರಸ್ತೆ ದಾಟಿ ಪೂಮಲೆ ಕಾಡಿನತ್ತ ಸಾಗಿತ್ತು. ರಾತ್ರಿ ವೇಳೆ ಮತ್ತೆ ಮರಳಿ ಬಂದ ಆನೆಗಳು ಅರಂಬೂರು ಸಮೀಪದ ಅರಣ್ಯ ಇಲಾಖೆಯ ಡಿಪೋದ (ನಾಟಾ ಸಂಗ್ರಹಾಲಯ) ಕಂಪೌಂಡ್ ಹುಡಿ ಮಾಡಿ ಹಾಕಿವೆ ಎಂದು ತಿಳಿದು ಬಂದಿದೆ.
ಮರಿಗಳು ಸೇರಿ 6-7 ಆನೆಗಳ ಹಿಂಡು ಅರಂಬೂರು, ಪರಿವಾರಕಾನ ಸೇರಿದಂತೆ ಆಲೆಟ್ಟಿ ಗ್ರಾಮದ ವಿವಿಧ ಭಾಗಗಳಲ್ಲಿ ಕಳೆದ ಹಲವು ದಿನಗಳಿಂದ ಕೃಷಿ ಹಾನಿ ಮಾಡುತ್ತಿವೆ.