
ರಸ್ತೆ ಬದಿ ಕುಸಿದು ನೀರಿನ ಪೈಪುಲೈನ್‌ಗೆ ಹಾನಿ
Sunday, May 25, 2025
ಬಂಟ್ವಾಳ: ಮಣಿಹಳ್ಳ-ಅಜಿಲಮೊಗರು ರಸ್ತೆಯ ಅಲ್ಲಿಪಾದೆ ಅಣೆಜ ತಿರುವಿನಲ್ಲಿ ರಸ್ತೆ ಅರ್ಧ ಕುಸಿದಿರುವ ಜತೆಗೆ ಬಹುಗ್ರಾಮ ಕುಡಿಯುವ ನೀರಿನ ಪೈಪುಲೈನ್ ಸಂಪೂರ್ಣ ಕುಸಿದು ಸುಮಾರು 5 ಪಂಚಾಯತ್‌ಗಳಿಗೆ ನೀರಿಲ್ಲದಂತಾಗಿದೆ.
ಇಲ್ಲಿ ರಸ್ತೆ ಕಳೆದ ವರ್ಷ ಕುಸಿದಿದ್ದು, ತಡೆಗೋಡೆ ನಿರ್ಮಾಣಕ್ಕೆ ಅನುದಾನ ಮಂಜೂರಾಗಿತ್ತು. ಆದರೆ ಲೋಕೋಪಯೋಗಿ ಇಲಾಖೆಯ ನಿರ್ಲಕ್ಷ್ಯದ ಪರಿಣಾಮ ಕಾಮಗಾರಿ ವಿಳಂಬವಾಗಿ ಆರಂಭಗೊಂಡು ಈ ಬಾರಿ ಮತ್ತೆ ಕುಸಿದು ಭಾನುವಾರ ನೀರಿನ ಪೈಪುಲೈನ್ ಕೂಡ ಕೆಳಕ್ಕೆ ಬಿದ್ದಿದೆ ಎಂಬ ಆರೋಪ ಕೇಳಿಬಂದಿದೆ.
ಸರಪಾಡಿ ಬಹುಗ್ರಾಮ ಯೋಜನೆಯ ಮೂಲಕ ತಾಲೂಕಿನ ಇರ್ವತ್ತೂರು, ಪಿಲಾತಬೆಟ್ಟು, ಕಾವಳಪಡೂರು, ಕಾವಳಮೂಡೂರು, ನಾವೂರು ಗ್ರಾ.ಪಂ.ಗಳಿಗೆ ಇದೇ ರಸ್ತೆಯಲ್ಲಿ ಪೈಪುಲೈನ್ ಹಾದು ಹೋಗಿದ್ದು, ಇದೀಗ ಎಲ್ಲಾ ಪಂಚಾಯತ್‌ಗಳಿಗೂ ನೀರಿಲ್ಲದಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.