
ಬಂಟ್ವಾಳದಲ್ಲಿ ಬೈಕ್ ಕಾಣೆ
Monday, May 26, 2025
ಬಂಟ್ವಾಳ: ಬಿ.ಸಿ. ರೋಡು ಸರ್ವಿಸ್ ರಸ್ತೆಯಲ್ಲಿರುವ ಬಾರೊಂದರ ಎದುರುಗಡೆ ಫ್ಲೈ ಓವರ್ ಕೆಳ ಭಾಗದಲ್ಲಿ ನಿಲ್ಲಿಸಿದ್ದ ಆಕ್ಟಿವಾ ಹೋಂಡಾ ದ್ವಿಚಕ್ರ ವಾಹನ ಕಳವಾಗಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಸಿ ರೋಡು ಸಮೀಪದ ಪರ್ಲಿಯಾ-ಮದ್ದ ನಿವಾಸಿ ಬಿಎಂ ಇಬ್ರಾಹಿಂ (63) ಅವರಿಗೆ ಸೇರಿದ ಬೈಕ್ ಕಳವಾಗಿದೆ. ಮಧ್ಯಾಹ್ನ ಬಿಸಿ ರೋಡು ಫ್ಲೈ ಓವರ್ ಕೆಳಗೆ ತನ್ನ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಗುರುವಾಯನಕೆರೆಗೆ ಹೋಗಿ ಸಂಜೆ ವಾಪಾಸು ಬಂದು ನೋಡಿದಾಗ ದ್ವಿಚಕ್ರ ವಾಹನ ಕಾಣೆಯಾಗಿತ್ತು. ಎಲ್ಲಡೆ ಹುಡುಕಾಡಿದರೂ ಇದುವರೆಗೆ ಪತ್ತೆಯಾಗದ ಹಿನ್ನಲೆಯಲ್ಲಿ ಅವರು ಬಂಟ್ವಾಳ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.