
ಹೊನ್ನಾವರ ಕರ್ಕಿಯಲ್ಲಿ 2ನೇಯ ದೈವಜ್ಞ ಬ್ರಾಹ್ಮಣ ಸಾಹಿತ್ಯ ಸಂಭ್ರಮ
Friday, May 30, 2025
ಹೊನ್ನಾವರ: ಉ.ಕ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿಯಲ್ಲಿರುವ ದೈವಜ್ಞ ಬ್ರಾಹ್ಮಣ ಸಮಾಜದ ಶ್ರೀ ಜ್ಞಾನೇಶ್ವರಿ ಸಭಾ ಭವನದಲ್ಲಿ 2ನೇಯ ದೈವಜ್ಞ ಬ್ರಾಹ್ಮಣ ಸಾಹಿತ್ಯ ಸಂಭ್ರಮವು ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾ ಸ್ವಾಮಿಗಳ ದಿವ್ಯ ನೇತೃತ್ವದಲ್ಲಿ 'ದೈವಜ್ಞ ಕಾವ್ಯೋತ್ಸವ' ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭವು ಇತ್ತೀಚೆಗೆ ನಡೆಯಿತು.
"ಹಲವು ಮನಗಳ ಭಾವಸಂಗಮ", ಎಂಬ ಕವನ ಸಂಕಲನ ಬಿಡುಗಡೆ ಹಾಗೂ ಕವಿ ಗೋಷ್ಠಿ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಲೋಕಾಯುಕ್ತ ಇಲಾಖೆಯ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆಯವರು ಹಾಗೂ ಕಾರ್ಯಕ್ರಮ ಆಯೋಜಕರಾದ ಪ್ರಶಾಂತ್ ಆರ್. ದೈವಜ್ಞ , ಆರ್.ಎಸ್ ರಾಯ್ಕರ್, ರವಿ ಎಸ್. ಗಾಂವ್ಕರ್, ಶ್ರೀಮತಿ ಪುಷ್ಪ ವರ್ಣೇಕರ್, ಪ್ರವೀಣ್ ಕುಮಾರ್ ರೇವಣಕರ್, ರಾಘವೇಂದ್ರ ಎನ್. ಶೇಟ್, ಪ್ರಶಾಂತ್ ಎಮ್. ಶೇಟ್, ವಾದಿರಾಜ ರಾಯ್ಕರ್, ಆನಂದಿ ಉಲ್ಲಾಸ್ ರಾಯ್ಕರ್, ವನೀತ ರಾಜೇಶ್ (ನಿರೂಪಕಿ) ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕುಂದಾಪುರದ ದೈವಜ್ಞ ಬ್ರಾಹ್ಮಣ ಸಮಾಜದ ಯುವ ಕವಿ ಕಿರಣ್ ಪಿ. ಶೇಟ್ ಸೇರಿದಂತೆ ರಾಜ್ಯದ ದೈವಜ್ಞ ಸಮಾಜದ 85ಕ್ಕೂ ಹೆಚ್ಚು ಕವಿಗಳನ್ನು ಗುರುತಿಸಿ, ಗೌರವಿಸಿ ಸನ್ಮಾನಿಸಲಾಯಿತು.