
ಹರೀಶ್ ಸುಲಾಯ ಒಡ್ಡಂಬೆಟ್ಟು ಅವರಿಗೆ ಸನ್ಮಾನ
Thursday, May 1, 2025
ಕಾಸರಗೋಡು: ಪಯ್ಯನೂರಿನ ನವಪುರಂನಲ್ಲಿರುವ ಮತಾತೀತ ಪುಸ್ತಕ ದೇವಾಲಯದಲ್ಲಿ ನಡೆದ ನವಪುರಂ ನವರಸಂ ಸಾಹಿತ್ಯ ಕಾರ್ಯಕ್ರಮದಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹರೀಶ್ ಸುಲಾಯ ಒಡ್ಡಂಬೆಟ್ಟು ಅವರನ್ನು ಗೌರವಿಸಿ, ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ನವಪುರಂ ದೇವಾಲಯದ ಸಂಚಾಲಕ ಪ್ರೋಪಿಲ್ ನಾರಾಯಣ ಮಾಸ್ಟರ್, ಸವಿಹೃದಯದ ಕವಿಮಿತ್ರರು ವೇದಿಕೆಯ ಸಂಚಾಲಕ ಸುಭಾಷ್ ಪೆರ್ಲ ಮತ್ತಿತರರು ಉಪಸ್ಥಿತಿತರಿದ್ದರು.