ಇಸ್ಲಾಂ ಧರ್ಮದ ಅವಹೇಳನ: ಅರುಣ್ ಕುಮಾರ್ ಪುತ್ತಿಲ ವಿರುದ್ಧ ಎಸ್‌ಡಿಪಿಐ ದೂರು

ಇಸ್ಲಾಂ ಧರ್ಮದ ಅವಹೇಳನ: ಅರುಣ್ ಕುಮಾರ್ ಪುತ್ತಿಲ ವಿರುದ್ಧ ಎಸ್‌ಡಿಪಿಐ ದೂರು

ಪುತ್ತೂರು: ನಿರಂತರವಾಗಿ ಇಸ್ಲಾಂನನ್ನು ಹಿಯಾಳಿಸಿ, ಕೋಮು ಪ್ರಚೋದನೆ ನೀಡುತ್ತಿರುವ ಸಂಘಪರಿವಾರದ ನಾಯಕ, ರೌಡಿ ಶೀಟರ್ ಅರುಣ್ ಕುಮಾರ್ ಪುತ್ತಿಲ ಎಂಬಾತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ ಪುತ್ತೂರು ಪೊಲೀಸ್ ಠಾಣೆಗೆ ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಅಶ್ರಫ್ ಬಾವು ಅವರು ದೂರು ನೀಡಿದ್ದಾರೆ.

ದೂರಿನಲ್ಲಿ ಸಾರ್ವಜನಿಕ ಸಂಚಾರಕ್ಕೆ ರಸ್ತೆ ತಡೆ ಮಾಡಿದ್ದರ ವಿರುದ್ಧ ಹಾಗೂ ಒಂದು ಧರ್ಮವನ್ನು ನಿಂದಿಸಿ ಕೋಮು ಗಲಭೆಗೆ ಪ್ರಚೋದನೆ ನೀಡಿದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.

ಏ.24 ರಂದು ಸಂಜೆ ಸುಮಾರು 6 ಗಂಟೆಗೆ ಬಿಜೆಪಿ ಪಕ್ಷದ ವತಿಯಿಂದ ಪುತ್ತೂರು ಬಸ್ಸು ನಿಲ್ದಾಣದ ಗಾಂಧಿಕಟ್ಟೆಯ ಸಮೀಪ, ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಭಯೋತ್ಪಾದನಾ ಕೃತ್ಯದ ವಿರುದ್ಧದ ಪ್ರತಿಭಟನೆಯಲ್ಲಿ ನಿರಂತರವಾಗಿ ಕೋಮುಭಾವನೆ ಕೆರಳಿಸುತ್ತಿರುವ ರೌಡಿಶೀಟರ್ ಅರುಣ್ ಕುಮಾರ್ ಪುತ್ತಿಲ ಎನ್ನುವವನು ಸಾರ್ವಜನಿಕ ಭಾಷಣ ಮಾಡುತ್ತಾ ಮುಸ್ಲಿಮರನ್ನು ಹಿಯಾಳಿಸುತ್ತಾ ‘ಇಸ್ಲಾಂ ಧರ್ಮ ಇರುವವರಿಗೆ ಭಯೋತ್ಪಾದನೆ ನಿಲ್ಲುವುದಿಲ್ಲ ಎನ್ನುತ್ತಾ ಇತ್ತೀಚೆಗೆ ನಡೆದ ಕಣ್ಣೂರಿನ ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧದ ಪ್ರತಿಭಟನೆಯನ್ನು ಉಲ್ಲೇಖಿಸುತ್ತಾ ಮಂಗಳೂರಿನಲ್ಲಿ ಭಯೋತ್ಪಾದನಾ ಕೃತ್ಯ ನಡೆಸಿದ್ದಾರೆ. ಮುಸ್ಲಿಮರೆ ಭಯೋತ್ಪಾದನಾ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಭಯೋತ್ಪಾದನೆ ನಡೆಸಿದವರೆಲ್ಲಾ ಮುಸಲ್ಮಾನರು’ ಎಂದು ಮುಸ್ಲಿಮರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಾ ಹಿಂದುಗಳ ಹಾಗೂ ಇನ್ನಿತರ ಧರ್ಮದವರಲ್ಲಿ ಬಹಿಷ್ಕಾರದ ಭಾವನೆ ಮೂಡುವಂತೆ ಮಾಡುತ್ತಾ ಇಸ್ಲಾಂ ಧರ್ಮವನ್ನು ಭಯೋತ್ಪಾದನಾ ಧರ್ಮವನ್ನಾಗಿ ಉಲ್ಲೇಖಿಸುತ್ತಾ ಕೋಮು ಭಾವನೆ ಕೆರಳಿಸುತ್ತಾ ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಹಿಂದುತ್ವವಾದದ ಮೂಲಕ ವಿಷ ಭೀಜ ಬಿತ್ತುತ್ತಾ ಸಾಮಾನ್ಯ ಜನರ ಮನಸ್ಸಿಗೆ ಇಸ್ಲಾಂ ಧರ್ಮದ ಬಗ್ಗೆ ಕೀಳು ಮಟ್ಟದ ಭಾವನೆ ಮೂಡುವಂತೆ ಮಾಡಿದ್ದಾರೆ. 

ಅಲ್ಲದೆ ಅವರೊಂದಿಗೆ ಪ್ರತಿಭಟನೆಯ ಸಂಘಟಕರು ಎದ್ರಿದಾರರು ಬೆಂಬಲ ನೀಡಿದಲ್ಲದೆ ಪ್ರೇರಣೆ ಮಾಡಿರುತ್ತಾರೆ. ಆದ್ದರಿಂದ ಎದ್ರಿದಾರ ಆರೋಪಿ ವಿರುದ್ಧ ಹಾಗೂ ಈ ಸಭೆಯ ಆಯೋಜಕರ ವಿರುದ್ಧ ಕಾನೂನು ಬಾಹಿರ ಸಭೆ ಸಾರ್ವಜನಿಕ ಸಂಚಾರಕ್ಕೆ ತಡೆ ಮಾಡಿ ರಸ್ತೆ ತಡೆ ಹಾಗೂ ಒಂದು ಧರ್ಮವನ್ನು ಇನ್ನೊಂದು ಧರ್ಮದ ವಿರುದ್ಧ ಎತ್ತಿಕಟ್ಟಿ ಕೋಮು ಭಾವನೆ ಕೆರಳಿಸಿ ಕೋಮು ಗಲಭೆಗೆ ಯತ್ನಿಸಿದ್ದಾರೆ. ಆದ್ದರಿಂದ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಒಂದನೇ ಆರೋಪಿಯನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕಾಗಿ ದೂರಿನಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article