
ಕಾಂತಾರ ಭಾಗ 2 ಚಿತ್ರ ತಂಡದ ಸದಸ್ಯ ನೀರಿನಲ್ಲಿ ಮುಳುಗಿ ಸಾವು
Wednesday, May 7, 2025
ಕೊಲ್ಲೂರು: ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಭಾಗ 2 ಚಿತ್ರ ತಂಡದ ಸದಸ್ಯ ಕೇರಳ ಮೂಲದ ವ್ಯಕ್ತಿ ಕೊಲ್ಲೂರು ಸೌಪರ್ಣಿಕ ನದಿಯಲ್ಲಿ ಮೇ 6ರಂದು ಸಂಜೆ ಈಜಲು ತೆರಳಿ ಆಯತಪ್ಪಿ ನೀರಲ್ಲಿ ಮುಳುಗಿ ಸಾವನಪ್ಪಿದ ಘಟನೆ ನಡೆದಿದೆ.
ಮೃತ ವ್ಯಕ್ತಿ ಕೇರಳದ ಕೊಟ್ಟಾಯಂ ನಿವಾಸಿ ಕಬೀಲ್ (32) ಎಂದು ಗುರುತಿಸಲಾಗಿದೆ. ಸಿನಿಮಾ ತಂಡದ ಇತರ ಇಬ್ಬರೊಡನೆ ಈಜಲು ತೆರೆಳಿದರೆನ್ನಲಾಗಿದೆ. ಕೊಲ್ಲೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.