ಜೂ.1 ರಂದು ಜಯಾನಂದ ಖಾರ್ವಿ ಅವರ ಶ್ರದ್ಧಾಂಜಲಿ ಸಭೆ

ಜೂ.1 ರಂದು ಜಯಾನಂದ ಖಾರ್ವಿ ಅವರ ಶ್ರದ್ಧಾಂಜಲಿ ಸಭೆ


ಕುಂದಾಪುರ: ಶ್ರೀ ಮಹಾಕಾಳಿ ದೇವಸ್ಥಾನ ಕುಂದಾಪುರ, ವಿದ್ಯಾರಂಗ ಮಿತ್ರ ಮಂಡಳಿ (ರಿ.) ಮತ್ತು ವಿದ್ಯಾನಿಧಿ ಯೋಜನೆ ಕುಂದಾಪುರ ಇವರ ಸಹಭಾಗಿತ್ವದಲ್ಲಿ ಇತ್ತೀಚಿಗೆ ನಿಧನರಾದ ಹಿರಿಯ ವಾಲಿಬಾಲ್ ಆಟಗಾರ, ಧಾರ್ಮಿಕ ಸಾಮಾಜಿಕ ಕ್ಷೇತ್ರದ ಮುಖಂಡ, ಕೊಂಕಣ ಖಾರ್ವಿ ಸಮಾಜದ ಮುಂದಾಳು, ಶ್ರೀ ಮಹಾಕಾಳಿ ದೇಗುಲದ ಮಾಜಿ ಅಧ್ಯಕ್ಷರಾದ ದಿ. ಜಯಾನಂದ ಖಾರ್ವಿ(64) ಅವರಿಗೆ ‘ನುಡಿ ನಮನ’ ಶ್ರದ್ದಾಂಜಲಿ ಕಾರ್ಯಕ್ರಮವು ಜೂನ್ 1 ರಂದು ಬೆಳಗ್ಗೆ 10 ಗಂಟೆಗೆ ಕುಂದಾಪುರ ಖಾರ್ವಿಕೇರಿಯ ಶ್ರೀ ಮಹಾಕಾಳಿ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.

ಈ ಸಂದರ್ಭದಲ್ಲಿ ಸಾರ್ವಜನಿಕರು, ಊರ-ಪರವೂರ ಸಮಾಜ ಬಾಂಧವರು, ಧಾರ್ಮಿಕ ಮುಖಂಡರು, ಸಾಮಾಜಿಕ, ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರದ ಅಭಿಮಾನಿ ಬಳಗದವರೆಲ್ಲರೂ ಸಭೆಯಲ್ಲಿ ಜೊತೆಯಾಗಿ ಭಾಗವಹಿಸಿ ಗೌರವಪೂರ್ಣ ನುಡಿನಮನ ಸಲ್ಲಿಸುವಂತೆ ಶ್ರೀ ಮಹಾಕಾಳಿ ದೇವಸ್ಥಾನದ ಆಡಳಿತ ಮಂಡಳಿಯ ಮೂವರು ಮೊಕ್ತೇಸರರು, ಅಧ್ಯಕ್ಷರರು/ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article