
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ: ಇಂದು ದ.ಕ. ಜಿಲ್ಲೆ ಬಂದ್, ಮೇ 6 ರವರೆಗೆ ನಿಷೇಧಾಜ್ಞೆ
Friday, May 2, 2025
ಮಂಗಳೂರು: ಬಜ್ಪೆ ಕಿನ್ನಿ ಪದವು ಎಂಬಲ್ಲಿ ನಿನ್ನೆ ರಾತ್ರಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಮಂಗಳೂರಿನಲ್ಲಿ ಪರಿಸ್ಥಿತಿ ಪ್ರಕ್ಷುಬ್ದ ಗೊಂಡಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮೇ 2 ಬೆಳಿಗ್ಗೆ 6 ರಿಂದ ಮೇ 6 ಬೆಳಿಗ್ಗೆ 6 ತನಕ ನಿಷೇಧಾಜ್ಞೆ ವಿಧಿಸಲಾಗಿದೆ.
ನಗರದ ಎಲ್ಲೆಡೆ ನಾಕಾಬಂಧಿ ಹಾಕಲಾಗಿದೆ ದುಷ್ಕರ್ಮಿಗಳ ಪತ್ತೆಗಾಗಿ ಪೊಲೀಸ್ ಪ್ರತ್ಯೇಕ ನಾಲ್ಕು ತಂಡ ರಚಿಸಲಾಗಿದೆ.
ಇಂದು ದಕ್ಷಿಣ ಕನ್ನಡ ಜಿಲ್ಲೆಯಾಧ್ಯಂತ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ವಿಶ್ವ ಹಿಂದೂ ಪರಿಷತ್ ಬದ್ ಘೋಷಿಸಿದೆ.