
ಮಿಸ್ ಆಂಡ್‌ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು 6ನೇ ಆವೃತ್ತಿ: ಡಾ. ಫ್ಲೋರೆನ್ಸ್ ಆಂಗ್ಲಿನ್ ಮುಡಿಗೆ ಮಿಸೆಸ್ ಇಂಡಿಯಾ ರನ್ನರ್ ಅಪ್ ಪ್ರಶಸ್ತಿ ಗರಿ
Saturday, May 31, 2025
ಮಂಗಳೂರು: ಪ್ರತಿಭಾ ಸೌನ್‌ಶಿಮಠ್ ಇನಿಶಿಯೇಟಿವ್, ಪಾತ್ ವೇ ಎಂಟರ್‌ಪ್ರೈಸಸ್ ಹಾಗೂ ಮರ್ಸಿ ಬ್ಯೂಟಿ ಅಕಾಡೆಮಿ ಹಾಗೂ ಲೇಡಿಸ್ ಸಲೂನ್ ಸಹಯೋಗದಲ್ಲಿ ಮಂಗಳೂರಿನ ಉಳಾಯಿಬೆಟ್ಟು ಪೆರ್ಮಂಕಿ ಆಸ್ಕರ್ ಕ್ಲಬ್‌ನಲ್ಲಿ ಎಡ್ಜ್ 9 ಮಿಸ್ ಹಾಗೂ ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು 6ನೇ ಆವೃತ್ತಿಯ ಸೌಂದರ್ಯ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ ನಡೆದಿದ್ದು ಡಾ. ಪ್ಲೋರೆನ್ಸ್ ಆಂಗ್ಲಿನ್ ಇವರು ಮಿಸೆಸ್ ಇಂಡಿಯಾ ಎರಡನೇ ರನ್ನರ್ ಅಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಬೆಸ್ಟ್ ಸ್ಟೈಲ್ ಐಕಾನ್ ಗರಿಮೆ ಪಡೆದಿರುವ ಇವರು ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯದ ಅಕ್ಯೇಪೇಶನಲ್ ಥೆರಪಿ ವಿಭಾಗದ ಮುಖ್ಯಸ್ಥರಾಗಿದ್ದಾರೆ.
ಒಟ್ಟು 3 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದಿದ್ದು, ಅಂತಿಮ ಹಂತಕ್ಕೆ 27 ಸ್ಪರ್ಧಿಗಳು ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದರು.
6, 25 ವರ್ಷ ಮೇಲ್ಪಟ್ಟ ಮದುವೆಯಾಗದವರ ಲೇಡಿ ವಿಭಾಗದಲ್ಲಿ 4, ಮಿಸೆಸ್ ವಿಭಾಗದಲ್ಲಿ 17 ಸ್ಪರ್ಧಿಗಳು ಅಂತಿಮ ಹಂತದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಒಟ್ಟು 12 ಮಂದಿ ತೀರ್ಪುಗಾರರು ಅಂತಿಮ ಹಂತದ ನಿರ್ಣಾಯಕರಾಗಿ ಪಾಲ್ಗೊಂಡಿದ್ದರು.