ರಾಜ್ಯ ಮಟ್ಟದ ವುಶು ಚಾಂಪಿಯನ್‌ಶಿಪ್: ಮಂಗಳೂರಿಗೆ 9 ಚಿನ್ನ ಸೇರಿ ಒಟ್ಟು 36 ಪದಕ

ರಾಜ್ಯ ಮಟ್ಟದ ವುಶು ಚಾಂಪಿಯನ್‌ಶಿಪ್: ಮಂಗಳೂರಿಗೆ 9 ಚಿನ್ನ ಸೇರಿ ಒಟ್ಟು 36 ಪದಕ


ಮಂಗಳೂರು: ಕರ್ನಾಟಕ ವುಶು ಅಸೋಸಿಯೇಶನ್ ಹಾಗೂ ದಕ್ಷಿಣ ಕನ್ನಡ ವುಶು ಅಸೋಸಿಯೇಶನ್ ವತಿಯಿಂದ ಮಂಗಳೂರಿನ ಯು.ಎಸ್ ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 24ನೇ ರಾಜ್ಯ ಮಟ್ಟದ ವುಶು ಚಾಂಪಿಯನ್‌ಶಿಪ್ ಪಂದ್ಯಾಟದಲ್ಲಿ ಮಂಗಳೂರಿಗೆ ಒಟ್ಟು 36 ಪದಕಗಳು ಲಭಿಸಿವೆ.

ವಿವಿಧ ವಿಭಾಗಗಳಲ್ಲಿ ನಡೆದ ಈ ಸ್ಪರ್ಧೆಯಲ್ಲಿ 9 ಮಂದಿ ಚಿನ್ನ, 10 ಮಂದಿ ಬೆಳ್ಳಿ ಮತ್ತು 17 ಮಂದಿ ಕಂಚಿನ ಪದಕ ಪಡೆದುಕೊಂಡಿದ್ದಾರೆ. ಏ.27ರಿಂದ ನಾಲ್ಕು ದಿನಗಳ ಕಾಲ ನಡೆದ ಈ ಚಾಂಪಿಯನ್‌ಶಿಪ್‌ನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 600 ಮಂದಿ ವುಶು ಕ್ರೀಡಾಪಟುಗಳು, ತರಬೇತಿದಾರರು, ನಿರ್ಣಾಯಕರು ಭಾಗವಹಿಸಿದ್ದರು. ಜಿಲ್ಲಾ ವುಶು ಕಾರ್ಯದರ್ಶಿ ಮತ್ತು ಇಮ್ಮೋರ್ಟಲ್ಸ್ ಮಾರ್ಷಲ್ ಆರ್ಟ್ಸ್ ಆಂಡ್ ಫಿಟ್ನೆಸ್ ಅಕಾಡೆಮಿಯ ಸಂಸ್ಥಾಪಕ ರೋಹನ್ ಎಸ್ ಅವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ವಿದ್ಯಾರ್ಥಿಗಳ ಪ್ರತಿಭೆ ಪ್ರದರ್ಶನಕ್ಕೆ ಇದೊಂದು ಉತ್ತಮ ವೇದಿಕೆಯಾಗಿತ್ತು.

9 ಮಂದಿಗೆ ಚಿನ್ನದ ಪದಕ 

ಕ್ರೀಡಾಕೂಟದಲ್ಲಿ ಮಂಗಳೂರಿನ ಇಮ್ಮೋರ್ಟಲ್ಸ್ ಮಾರ್ಷಲ್ ಆರ್ಟ್ಸ್ ಆಂಡ್ ಫಿಟ್ನೆಸ್ ಅಕಾಡೆಮಿಯ ಹಿಸ್ಸಾನ್, ಶಮಿಯುಲ್ಲಾ, ಸಾನ್ವಿ ಎಸ್, ಮಾನ್ವಿತಾ, ಧ್ರುವಿನ್, ಅರ್ನಾ ಎಚ್, ಪ್ರಥಮ್, ಪ್ರಜ್ವಲ್ ಮತ್ತು ಜಯಶ್ರೀ ಇವರು ಚಿನ್ನದ ಪದಕ ಪಡೆದುಕೊಂಡರು. ಅದ್ನಾನ್, ಹರ್ಷಿತ್, ಹಮ್ದಾನ್, ತನೂಫ್, ಕಶ್ವಿ, ಜುಮೈಲಾ, ದಿಯಾ, ಶಿಫಾ, ಹನೀನ್ ಮತ್ತು ಜಸ್ಲಿನ್ ಇವರುಗಳು ಬೆಳ್ಳಿ ಪದಕ ಪಡೆದುಕೊಂಡರು. ಭವ್ಯೇಶ್, ರಿಯಾನ್, ಅಫ್ಫಾನ್, ಮೋನಿಶ್, ಜೈದ್, ಹರ್ಷಲ್ ಎನ್, ಹರ್ಷಲ್ ಎ, ನಜ್ಮಿನ್, ಮಾಹೆರ್, ಆರವ್, ಶ್ರವಂತ್, ಸಾನ್ವಿ, ಕ್ಷಿತಿಜ್, ಜನಿತ್, ಯಶ್, ಪ್ರತೀಕ್ ಮತ್ತು ಸೇನಾನ್ ಇವರುಗಳು ಕಂಚಿನಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article