ಸುರತ್ಕಲ್ ಬಳಿ ಚಲಿಸುತ್ತಿರುವ ಕಾರಿನಲ್ಲಿ ಬೆಂಕಿ

ಸುರತ್ಕಲ್ ಬಳಿ ಚಲಿಸುತ್ತಿರುವ ಕಾರಿನಲ್ಲಿ ಬೆಂಕಿ

ಮಂಗಳೂರು: ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ ಸಂಭವಿಸಿ ಕಾರು ಸುಟ್ಟು ಹೋದ ಘಟನೆ ಸುರತ್ಕಲ್ ಫ್ಲೈ ಓವರ್ ಕೆಳಭಾಗದಲ್ಲಿ ಮೇ 28ರ ಬುಧವಾರ ಸಂಜೆ ನಡೆದಿದೆ.

ಕಾರು ಚಲಾಯಿಸುತ್ತಿದ್ದ ಮಹಿಳೆ ಬೆಂಕಿ ಕಂಡು ಕಾರಿನಿಂದ ಇಳಿದು ಬಂದಿದ್ದು, ಪಾರಾಗಿದ್ದಾರೆ.

ಕಾರಿನಲ್ಲಿದ್ದ ಇತರ ವಸ್ತುಗಳನ್ನು ಕೆಳಗಿಳಿಸಿದ್ದಾರೆ. ಕಾರಿನಲ್ಲಿ ಶಾರ್ಟ್ ಸರ್ಕ್ಯೂಟ್  ಆಗಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ.

ಸುರತ್ಕಲ್ ಪೊಲೀಸರ ತುರ್ತು ಕರೆಯ ಮೇರೆಗೆ ಎಚ್‌ಪಿಸಿಎಲ್ ಇದರ ಅಗ್ನಿಶಾಮಕ ದಳ ಹಾಗೂ ರಾಜ್ಯ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುವಲ್ಲಿ ಶ್ರಮಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article