
ಯು.ಟಿ. ಖಾದರ್ ನಿಜ ಬಣ್ಣ 'ಜಿಹಾದಿ ಮನಸ್ಥಿತಿ' ಬಯಲು: ಸತೀಶ್ ಕುಂಪಲ
Saturday, May 3, 2025
ಮಂಗಳೂರು: ಸ್ಪೀಕರ್ ಆಗಿ ಮಹತ್ವದ ಸ್ಥಾನದಲ್ಲಿರುವ ಯು.ಟಿ. ಖಾದರ್ ಅವರು ಸುಹಾಸ್ ಹತ್ಯೆಯಲ್ಲಿ ಫಜಲ್ ಹತ್ಯೆಯ ಪ್ರತೀಕಾರ ಇಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಸ್ಪೀಕರ್ ಸ್ಥಾನದಲ್ಲಿದ್ದವರು ಈ ರೀತಿ ಹೇಳಿಕೆ ನೀಡಬಾರದಿತ್ತು. ಈಗ ಪೊಲೀಸ್ ಕಮಿಷನರ್ ಅವರೇ ಸುದ್ದಿಗೋಷ್ಠಿಯಲ್ಲಿ, ಸುಹಾಸ್ ಹತ್ಯೆಯಲ್ಲಿ ಫಾಜಲ್‌ನ ಸಹೋದರನೇ ಸುಪಾರಿ ನೀಡಿರುವ ಅಂಶವನ್ನು ಹೇಳಿದ್ದಾರೆ.
ಈಗ ಸ್ಪೀಕರ್ ಅವರ ನಿಜವಾದ ಜಿಹಾದಿ ಮನಸ್ಥಿತಿ ಬೆಳಕಿಗೆ ಬರುತ್ತಿದೆ. ಈ ಮೂಲಕ ಯು.ಟಿ. ಖಾದರ್ ಅವರ ನಿಜ ಬಣ್ಣ ಅನಾವರಣಗೊಂಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.