
ಸತ್ತಮೇಲೆ ಬಿಜೆಪಿಯವರಿಂದ ಮೊಸಳೆ ಕಣ್ಣೀರು: ಪದ್ಮರಾಜ್ ಆರ್. ಪೂಜಾರಿ ಆರೋಪ
ಮಂಗಳೂರು: ಸುಹಾಸ್ ಶೆಟ್ಟಿಯ ವಿರುದ್ಧ ರೌಡಿಶೀಟರ್ ದಾಖಲಿಸಿದ್ದು ಯಾರು? ಆತನ ಹತ್ಯೆಯಾದ ನಂತರ ಒಂದು ಪಕ್ಷದ ರಾಜ್ಯಾಧ್ಯಕ್ಷರು ಸೇರಿ ಅನೇಕ ನಾಯಕರು ಮನೆಗೆ ಹೋಗಿದ್ದಾರೆ. ಅದೇ ಆತ ಸರಿ ಇರುವಾಗ ಆತನಲ್ಲಿಗೆ ಹೋಗಿ ಬದಲಾಗುವಂತೆ ಎಷ್ಟು ಮಂದಿ ಮತನಾಡಿದ್ದಾರೆ. ಈಗ ಅವರ ಮನೆಗೆ ಹೋಗಿ ಏನು ಸಾಧಿಸಿದ್ದಾರೆ. ಅತ್ತ ಮೇಲೆ ಮೊಸಳೆ ಕಣ್ಣೀರು ಹಾಕುವುದಲ್ಲ ಎಂದು ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಆರೋಪಿಸಿದರು.
ಅವರು ಇಂದು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ವಿರೋಧ ಪಕ್ಷದವರು ಎಲ್ಲಾ ವಿಚಾರವನ್ನೂ ರಾಜಕೀಯ ಮಾಡಿ ಪ್ರತಿನಿತ್ಯ ಸುದ್ದಿಗೋಷ್ಠಿಗಳನ್ನು ನಡೆಸಿ ಬೆಂಕಿ ಹಚ್ಚುವ ಬದಲು ಪ್ರೀತಿ ಹಂಚುವ ಕೆಲಸ ಆಗಬೇಕು ಎಂದರು.
ಏ.26 ರಂದು ಕೇರಳ ಮೂಲದ ಅಶ್ರಫ್ ಎಂಬಾತನನ್ನು ವಿನಾಃ ಕಾರಣ ಹಲ್ಲೆ ಮಾಡಿ ಕೊಲ್ಲುತ್ತಾರೆ. ಇದು ಮಾನವ ಕುಲದಲ್ಲಿ ಹುಟ್ಟಿದವರು ತಲೆ ತಗ್ಗಿಸುವಂತಹ ಕೆಲಸ ಮಾಡಿದ್ದಾರೆ. ಈ ಪ್ರಕಾರಣದಲ್ಲಿ ತನಿಖೆ ಕಾರ್ಯ ನಿಧನವಾದರೂ ಬಳಿಕ ತನಿಖೆ ನಡೆಸಿ 21 ಮಂದಿಯನ್ನು ಬಂಧಿಸಲಾಗಿದೆ. 17 ಮಂದಿಗೆ ನೋಟೀಸು ನೀಡಲಾಗಿದೆ. ಇದರ ತನಿಖೆ ನಡೆಯುತ್ತಿದೆ ಎಂದರು.
ಬಜ್ಪೆಯಲ್ಲಿ ಸುಹಾಸ್ ಶೆಟ್ಟಿಯ ಹತ್ಯೆ ನಡೆದಿದ್ದು, ಇದನ್ನು ಉಗ್ರವಾಗಿ ಖಂಡಿಸುತ್ತೇನೆ. ಇದರ ಬೆನ್ನಲ್ಲಿಯೇ 2-3 ಜನರ ಹತ್ಯೆಗೆ ಯತ್ನ ನಡೆದಿದೆ. ಸುಹಾಸ್ ಶೆಟ್ಟಿಯ ಹತ್ಯೆಯಲ್ಲಿ ಹಿಂದೂ ಪಟ್ಟಿಯನ್ನು ಕಟ್ಟಿ ಬಿಜೆಪಿ ರಾಜಕೀಯ ಮಾಡುತ್ತಿದ್ದು, ನಾನು ಕೂಡ ಹಿಂದೂ, ನಾನೂ ಹಿಂದೂ ಸಾಂಪ್ರದಾಯವನ್ನು ಅನುಸರಿಸುತ್ತೇನೆ. ಹಿಂದೂ ಧರ್ಮ ಎಂದಿಗೂ ಇನ್ನೊಂದು ಧರ್ಮವನ್ನು ಧ್ವೇಷಿಸಲು ಹೇಳುವುದಿಲ್ಲ. ಹಿಂದೂ ಧರ್ಮ ಇನ್ನೊಂದು ಧರ್ಮವನ್ನು ಗೌರವಿಸು, ಧರ್ಮದಲ್ಲಿ ಇರುವ ಅಶಕ್ತರ ಕಣ್ಣೀರು ಒರೆಸುವ ಕೆಲಸ ಮಾಡು ಎಂದು ಹೇಳುತ್ತದೆ. ಅದನ್ನು ನಾವು ಮಾಡಬೇಕು ಎಂದು ಹೇಳಿದರು.
ಆಂಟಿ ಸೋಷಿಯಲ್ ಮೀಡಿಯಾ ನಿಲ್ಲಬೇಕು:
ಇತ್ತೀಚಿನ ದಿನದಲ್ಲಿ ಸಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದು, ಆಂಟಿ ಸೋಷಿಯಲ್ ಮೀಡಿಯಾ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ಸಾಮಾಜಿಕ ಜಾಲತಾಣದಲ್ಲಿ ಬರುವ ಕಮೆಂಟ್ಸ್ ಮತ್ತು ಅದಕ್ಕೆ ಬಳಸುವ ಭಾಷೆಗಳನ್ನು ನೋಡಿದರೆ ತಲೆ ತಗ್ಗಿಸುವಂತೆ ಮಾಡುತ್ತದೆ. ಕಮೆಂಟ್ ಮಾಡುವ ಮೊದಲು ಯೋಚಿಸಿ ನೀವು ನಿಮ್ಮ ತಂದೆ-ತಾಯಿಯ ಗೌರವವನ್ನು ಉಳಿಸಬೇಕು ಕಳೆಯಬಾರದು. ನೀವು ಯಾವ ಸಂಘ-ಸಂಸ್ಥೆಗೆ ಬೆಂಬಲಿಸುತ್ತಿರೋ ಅದರ ಗೌರವವನ್ನು ಕಾಪಾಡಬೇಕು. ಈಗಾಗಲೇ ಪೊಲೀಸರು ಆಕ್ಷೇಪರ್ಹ ಪೋಸ್ಟ್, ಕಮೇಂಟ್ಸ್ಗಳ ವಿರುದ್ಧ ಕೇಸು ದಾಖಲಿಸುತ್ತಿದ್ದು, ಇದರಿಂದ ನಿಮ್ಮ ತಂದೆ-ತಾಯಿಗೆ ನಷ್ಟ ಎಂದು ಪದ್ಮರಾಜ್ ಆರ್. ಪೂಜಾರಿ ಹೇಳಿದರು.
ಜನ ನಾಯಕರು ಜನರಿಗೆ ಮಾದರಿಯಾಗಬೇಕು:
ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಅವರು ತೆಕ್ಕಾರಿನಲ್ಲಿ ದೇವಸ್ಥಾನದಲ್ಲಿ ನಡೆದ ಬ್ರಹ್ಮಕಲಶೋತ್ಸವದಲ್ಲಿ ಒಂದು ಸಮುದಾಯವನ್ನು ಗುರಿಯಾಗಿಸಿ ಮಾತನಾಡಿದ್ದಾರೆ. ನೀವು ಮಾತನಾಡಿರುವುದನ್ನು ದೇವರು ಮೆಚ್ಚುತ್ತಾರಾ? ರಾಜಕೀಯ ನಾಯಕರುಗಳು ಸಜ ಸಮಾನ್ಯರಿಗೆ ಮಾದರಿಯಾಗಿರಬೇಕು. ಅದನ್ನು ಬಿಟ್ಟು ಮರ್ಯಾದಿ ಕಳೆದುಕೊಳ್ಳುವುದಲ್ಲ. ಈ ರೀತಿಯ ಘಟನೆಗಳಿಂದ ಜಿಲ್ಲೆ ಅಭಿವೃದ್ಧಿ ಹೊಂದುವುದಿಲ್ಲ. ಹಿಂದುಳಿಯುತ್ತದೆ. ಇಲ್ಲಿ ಅಭಿವೃದ್ದೀಯಾಗದಿದ್ದಲ್ಲಿ ಮಕ್ಕಳು ಪರದೇಶಕ್ಕೆ ಕೆಲಸಕ್ಕೆ ಹೋದರೆ, ಹೆಚ್ಚವರು ವೃದ್ಧಾಶ್ರಮಕ್ಕೆ ಹೋಗಬೇಕಾದಿತು ಎಂದು ಪದ್ಮರಾಜ್ ಆರ್. ಪೂಜಾರಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಶಶಿಧರ್ ಹೆಗ್ಡೆ, ಇಬ್ರಾಹಿಂ ಕೋಡಿಜಾಲ್, ನವಿನ್ ಡಿ’ಸೋಜಾ, ಶಂಶುದಿನ್, ದುರ್ಗಾಪ್ರಸಾದ್, ಶಬೀರ್ ಉಪಸ್ಥಿತರಿದ್ದರು.