
ಅಬ್ದುಲ್ ರಹಿಮಾನ್ ಕೊಳ್ತಮಜಲ್ ನಿವಾಸಕ್ಕೆ ಸಿಪಿಐಎಂ ಜಿಲ್ಲಾ ಸಮಿತಿ ನಿಯೋಗ ಭೇಟಿ
Friday, May 30, 2025
ಮಂಗಳೂರು: ದುಷ್ಕರ್ಮಿಗಳಿಂದ ಹತ್ಯೆಯಾದ ಅಬ್ದುಲ್ ರಹಿಮಾನ್ ಕೊಳ್ತಮಜಲ್ ಅವರ ನಿವಾಸಕ್ಕೆ ಸಿಪಿಐಎಂ ಜಿಲ್ಲಾ ಸಮಿತಿ ನಿಯೋಗ ಭೇಟಿ ಇಂದು ಭೇಟಿ ನೀಡಿತು.
ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿ, ನ್ಯಾಯಕ್ಕಾಗಿ ನಡೆಸುವ ಹೋರಾಟದಲ್ಲಿ ಜೊತೆಗಿರುವುದಾಗಿ ಭರವಸೆ ನೀಡಿತು.
ನಿಯೋಗದಲ್ಲಿ ಸಿಪಿಐಎಂ ಜಿಲ್ಲಾ ಸಮಿತಿ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಯಾದವ ಶೆಟ್ಟಿ, ಸುನಿಲ್ ಕುಮಾರ್ ಬಜಾಲ್, ಬಿ.ಎಂ. ಭಟ್, ವಸಂತ್ ಆಚಾರಿ, ಸದಾಶಿವ ಕುಪ್ಪೆಪದವ್, ಯೋಗೀಶ್ ಜಪ್ಪಿನಮೊಗರು, ಈಶ್ವರಿ ಬೆಳ್ತಂಗಡಿ, ಸಂತೋಷ್ ಬಜಾಲ್, ರಫೀಕ್ ಹರೇಕಳ, ರಝಾಕ್ ಮೊಂಟೆಪದವ್, ರಝಾಕ್ ಮುಡಿಪು, ರಿಝ್ವಾನ್ ಹರೇಕಳ, ಬಾವಾ ಪದರಂಗಿ ಉಪಸ್ಥಿತರಿದ್ದರು.