.jpeg)
ಕುಡುಪು ಹತ್ಯೆ ಪ್ರಕರಣ: ಮತ್ತೊಬ್ಬ ಆರೋಪಿಯನ್ನು ಬಂಧಿಸಿದ ಪೊಲೀಸರು
Thursday, May 1, 2025
ಮಂಗಳೂರು: ಕುಡುಪು ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯ ಬಳಿಕ ತಲೆಮರೆಸಿಕೊಂಡಿದ್ದ ಅನಿಲ್ ಎಂಬಾತನನ್ನು ಗೋಕಾಕದಿಂದ ವಶಕ್ಕೆ ಪಡೆಯಲಾಗಿದೆ. ಇದರೊಂದಿಗೆ ಬಂಧಿತ ಆರೋಪಿಗಳ ಸಂಖ್ಯೆ 21ಕ್ಕೆ ಏರಿಕೆಯಾಗಿದೆ.
ಹಲ್ಲೆ ನಡೆಸಿದ ಬಳಿಕ ತಲೆ ಮರೆಸಿಕೊಂಡವರಿಗಾಗಿ ಪೊಲೀಸರ ತಂಡ ಹುಡುಕಾಟ ನಡೆಸುತ್ತಿದೆ. ಆ ದಿನ ಸ್ಥಳದಲ್ಲಿದ್ದ ಸುಮಾರು 15 ಮಂದಿಗೆ ನೋಟಿಸ್ ನೀಡಿ ವಿಚಾರಣೆಗೆ ಬರಲು ತಿಳಿಸಲಾಗಿದ್ದು, ಕೆಲವರ ವಿಚಾರಣೆ ನಡೆಯುತ್ತಿದೆ.
ಕುಡುಪು ವ್ಯಾಪ್ತಿಯಲ್ಲಿರುವ ಸಿಸಿ ಕೆಮರಾ ಪರಿಶೀಲಿಸಲಾಗುತ್ತಿದ್ದು, ಪ್ರತ್ಯಕ್ಷದರ್ಶಿಗಳ ಸಹಕಾರವನ್ನೂ ಪಡೆಯಲಾಗುತ್ತದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಘಟನೆ ನಡೆಯಲು ನಿರ್ದಿಷ್ಟವಾಗಿ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಘೋಷಣೆ ಬಗ್ಗೆ ದೃಢ ಪಡಿಸುವ ನಿರ್ದಿಷ್ಟವಾಗಿ ಸಾಕ್ಷಿಗಳು ಇನ್ನೂ ಸಿಕ್ಕಿಲ್ಲ ಎಂದು ಆಯುಕ್ತರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.