
ಮೂಡುಕೊಣಾಜೆ ಬ್ರಹ್ಮಶ್ರೀ ಮುಗೇರ ಮತ್ತು ಮಹಾಕಾಳಿ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧಮ೯ಸ್ಥಳದಿಂದ ರೂ. 2 ಲಕ್ಷ ಅನುದಾನ
Thursday, May 15, 2025
ಮೂಡುಬಿದಿರೆ: ಮೂಡುಕೊಣಾಜೆ ಬ್ರಹ್ಮ ಶ್ರೀ ಮುಗೇರ ಮತ್ತು ಮಹಾ ಕಾಳಿ ದೈವಸ್ಥಾನಕ್ಕೆ ಶ್ರೀ ಕ್ಷೇತ್ರ ಧಮ೯ಸ್ಥಳದಿಂದ ಬಂದಿರುವ ರೂ 2.ಲಕ್ಷ ಅನುದಾನದ ಡಿ.ಡಿ.ಯನ್ನು ತಾಲೂಕಿನ ಯೋಜನಾಧಿಕಾರಿ ಧನಂಜಯ ಅವರು ಜೀರ್ಣೋದ್ದಾರ ಸಮಿತಿ ಅಧ್ಯಕ್ಷರು, ದೈವಸ್ಥಾನದ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.
ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ರುಕ್ಕಯ್ಯ ಪೂಜಾರಿ, ಸುಕೇಶ್ ಶೆಟ್ಟಿ ಎರ್ಮುಡೆ, ಅಧ್ಯಕ್ಷ ಎಸ್. ಪ್ರವೀಣ್ ಕುಮಾರ್ ಶಿರ್ತಾಡಿ, ಕಾರ್ಯದರ್ಶಿ ಅರುಣ್ ಕುಮಾರ್ ಎಸ್., ಜೊತೆ ಕಾರ್ಯದರ್ಶಿ ಸುರೇಂದ್ರ ಸಾಲ್ಯಾನ್, ಗುರಿಕಾರ ಅಮ್ಮು ನಡ್ಯೋಡಿ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ರಾಘವ ಪಿ. ಸುವರ್ಣ ಕೊಪ್ಪ, ಅಧ್ಯಕ್ಷ ಶಶಿಕುಮಾರ್ ಶೆಟ್ಟಿ, ಕಾರ್ಯದರ್ಶಿ ಸಚಿನ್ ಹೆಗ್ಡೆ, ಬ್ರಹ್ಮಶ್ರೀ ಮುಗೆರ್ಕಳ ಆಡಳಿತ ಸಮಿತಿ ಕಾರ್ಯದರ್ಶಿ ಶ್ರೀಧರ ನಡ್ಯೋಡಿ, ಭ್ರಮರಶ್ರೀ ಯುವತಿ ಮಂಡಳಿಯ ಅಧ್ಯಕ್ಷೆ ಸುಶೀಲ, ಮೂಡುಕೊಣಾಜೆ ಒಕ್ಕೂಟದ ಅಧ್ಯಕ್ಷೆ ಲತಾ ಹೆಗ್ಡೆ, ಉಪಾಧ್ಯಕ್ಷ ಸುರೇಶ್, ಮಾಜಿ ಅಧ್ಯಕ್ಷ ಸುಧಾಕರ ಹೆಗ್ಡೆ, ಒಕ್ಕೂಟದ ಪದಾಧಿಕಾರಿಗಳು ಅಲಂಗಾರು ವಲಯದ ಮೇಲ್ವಿಚಾರಕ ಚಂದ್ರಹಾಸ ಶೆಟ್ಟಿ, ಸೇವಾಪ್ರತಿನಿಧಿ ಜಯಲಕ್ಷ್ಮೀ ಈ ಸಂದಭ೯ದಲ್ಲಿ ಉಪಸ್ಥಿತರಿದ್ದರು.