
ಶ್ರೀ ಗೋಕರ್ಣನಾಥ ಕೋ-ಓಪರೇಟಿವ್ ಬ್ಯಾಂಕಿನ ಕುಂದಾಪುರ ಶಾಖೆಯ ಗ್ರಾಹಕರ ಸಭೆ
ಕುಂದಾಪುರ: ಶ್ರೀ ಗೋಕರ್ಣನಾಥ ಕೋ-ಓಪರೇಟಿವ್ ಬ್ಯಾಂಕಿನ ಶತಮಾನೋತ್ಸವದ ಸಂಭ್ರಮಾಚರಣೆಯ ಪೂರ್ವಭಾವಿಯಾಗಿ ಇದರ ಕುಂದಾಪುರ ಶಾಖೆಯ ಗ್ರಾಹಕರ ಸಭೆ ಬ್ಯಾಂಕಿನ ಅಧ್ಯಕ್ಷರಾದ ಚಂದ್ರಶೇಖರ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಕುಂದಾಪುರ ಶಾಖೆಯಲ್ಲಿ ಜರಗಿತು.
ಬ್ಯಾಂಕಿನ ಅಧ್ಯಕ್ಷರಾದ ಚಂದ್ರಶೇಖರ ಕುಮಾರ್ ಅವರು ಮಾತನಾಡಿ ಬ್ಯಾಂಕಿಂಗ್ ಸೇವೆಯ ಜೊತೆಗೆ ರಾಷ್ಟ್ರೀಕೃತ ಬ್ಯಾಂಕುಗಳು ನೀಡುವ ಹೆಚ್ಚಿನ ಸೇವೆಗಳಾದ RTGS/NEFT/IMPS/ DEBIT CARD/ POS/ E.COM/NACH/MOBILE BANKING/SMS/ ಕೋರ್ ಬ್ಯಾಂಕಿಂಗ್ ಸೌಲಭ್ಯಗಳೊಂದಿಗೆ ಅಂತರ್ ಶಾಖಾ ನಗದು ವರ್ಗಾವಣೆ ಹಾಗೂ ವಿವಿಧ ರೀತಿಯ ಸಾಲ ಸೌಲಭ್ಯಗಳ ಮಾಹಿತಿ ನೀಡಿ ಅದರ ಪ್ರಯೋಜನ ಪಡೆದುಕೊಳ್ಳುವುದರ ಜೊತೆಗೆ ಗ್ರಾಹಕರ ಸಲಹೆ ಸಹಕಾರದಿಂದ ಮಾತ್ರ ಬ್ಯಾಂಕು ಅಭಿವೃದ್ಧಿ ಹೊಂದಲು ಸಾಧ್ಯ ಎಂದರು .
ಈ ಸಂದರ್ಭದಲ್ಲಿ ಕುಂದಾಪುರ ಶಾಖೆಯ ಮಾಜಿ ನಿರ್ದೇಶಕರಾದ ದಿವಂಗತ ಗೋವಿಂದ ಬೀಜೂರು ಅವರ ಮಕ್ಕಳಾದ ವಸಂತ ಕುಮಾರ್ ಮತ್ತು ಬಿ.ಶಶಿಕಲಾ ಇವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಬ್ಯಾಂಕಿನ ಉಪಾಧ್ಯಕ್ಷರಾದ ಜಯರಾಮ ಪೂಜಾರಿ, ನಿರ್ದೇಶಕರಾದ ಜಯರಾಮ್ ಕಾರಂದೂರು, ಕೆ.ಕೆ. ಪೂಜಾರಿ, ಜನರಲ್ ಮ್ಯಾನೇಜರ್ ವಿಜಯ ಎಂ. ಕೋಟ್ಯಾನ್, ಮ್ಯಾನೇಜರ್ ಹರೀಶ್ ಕೊಡವೂರು ಹಾಗೂ ಉದ್ಯಮಿ ರೋಹಿದಾಸ್ ಪಿ. ನಾಯಕ್ ಉಪಸ್ಥಿತರಿದ್ದರು.
ಸಿಬ್ಬಂದಿ ವೇಣು ಸ್ವಾಗತಿಸಿ, ಪ್ರಭಾರ ಶಾಖಾಧಿಕಾರಿ ಸುರೇಶ ಎನ್. ಕಾರ್ಯಕ್ರಮ ನಿರೂಪಿಸಿದರು.