
ಮುಲ್ಕಿಯ ಯುವಕ ದುಬೈಯಲ್ಲಿ ಸಾವು
Monday, May 12, 2025
ಮುಲ್ಕಿ: ಮುಲ್ಕಿ ಕೊಲ್ನಾಡು ನಿವಾಸಿ ಸಫ್ವಾನ್ (25) ಎಂಬವರು ದುಬೈಯ ದೇರಾದಲ್ಲಿ ಹೃದಯಾಘಾತಕ್ಕೊ ಳಗಾಗಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ.
ಕೊಲ್ನಾಡು ನಿವಾಸಿ ಮುಹಮ್ಮದ್ ಮುಸ್ತಫಾ ಮತ್ತು ಝುಬೈದಾ ದಂಪತಿಯ ಪ್ರಥಮ ಪುತ್ರನಾಗಿರುವ ಸಫ್ವಾನ್, ಶನಿವಾರ ಬೆಳಗ್ಗೆ ಕೆಲಸಕ್ಕೆ ತೆರಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ ವೇಳೆ ಏಕಾಏಕಿ ಬಿದ್ದಿದ್ದಾರೆ. ಆತಂಕಕ್ಕೊಳಗಾದ ಆತನ ಸ್ನೇಹಿತರು ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದರು. ಆಸ್ಪತ್ರೆ ತಲುಪುವಷ್ಟರಲ್ಲೇ ಅವರು ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೊಷಿಸಿದ್ದಾರೆ. ರವಿವಾರ ರಾತ್ರಿ ಮೃತದೇಹವನ್ನು ಕೆ.ಎಸ್. ರಾವ್ ನಗರದ ಖಬರ್ಸ್ತಾನದಲ್ಲಿ ದಫನ ಕಾರ್ಯ ನಡೆಯಿತು.