
ದ.ಕ. ಜಿಲ್ಲಾ ಬಂದ್: ಕುಕ್ಕೆ ಸಂಪೂರ್ಣ ಬಂದ್
Friday, May 2, 2025
ಸುಬ್ರಹ್ಮಣ್ಯ: ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ಜಿಲ್ಲಾ ಬಂದ್‌ಗೆ ಕರೆ ನೀಡಲಾಗಿದ್ದ ಹಿನ್ನಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲೂ ಅಂಗಡಿಗಳನ್ನು ಬಂದ್ ಮಾಡಲಾಗಿತ್ತು.
ಕುಕ್ಕೆ ಸುಬ್ರಹ್ಮಣ್ಯ ಪೇಟೆ ಸೇರಿದಂತೆ ಪರಿಸರದ ಏನೆಕಲ್ಲು, ಬಳ್ಪ, ಐನೆಕಿದು, ಕುಲ್ಕುಂದ, ಕೈಕಂಬ, ಬಿಳಿನೆಲೆ ಪ್ರದೇಶಗಳಲ್ಲಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ಸ್ಥಳೀಯ ಕೆಲ ವಾಹನಗಳ ಓಡಾಟ ಸಂಚಾರ ನಡೆಸಲಾಗಿಲ್ಲ, ಉಳಿದಂತೆ ಸರಕಾರಿ ಬಸ್ ಓಡಾಟ ಎಂದಿನಂತಿದ್ದವು.
ಕುಕ್ಕೆಯಲ್ಲಿ ಅಂಗಡಿಗಳೂ ಬಂದ್ ಇದ್ದರೂ ಸರಣಿ ರಜೆಯ ಹಿನ್ನಲೆಯಲ್ಲಿ ಕ್ಷೇತ್ರಕ್ಕೆ ಹೆಚ್ಚಿನ ಭಕ್ತರು ಆಗಮಿಸಿದ್ದರಿಂದ ಶುಕ್ರವಾರ ಕ್ಷೇತ್ರದಲ್ಲಿ ಅಧಿಕ ಭಕ್ತ ಸಂದಣಿ ಕಂಡುಬಂದಿತ್ತು. ಕ್ಷೇತ್ರದಲ್ಲಿ ಎಂದಿನಂತೆ ಸೇವೆ, ಅನ್ನ ಪ್ರಸಾದ ವಿತರಣೆ ಸ್ವೀಕರಿಸಿದರು.