
ಮೇವು ಸಾಗಾಟದ ಟೆಂಪೋ ಪಲ್ಟಿ
Monday, May 26, 2025
ಉಜಿರೆ: ಜಾನುವಾರುಗಳ ಮೇವು ಸಾಗಿಸುತ್ತಿದ್ದ ವಾಹನವೊಂದು ಉರುಳಿ ಬಿದ್ದ ಘಟನೆ ಭಾನುವಾರ ತಡರಾತ್ರಿ ನಡೆದಿದೆ.
ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಕಲ್ಮಂಜ ಗ್ರಾಮದ ನಿಡಿಗಲ್ ಎಂಬಲ್ಲಿ ಚಾರ್ಮಾಡಿ ಕಡೆಯಿಂದ ಉಜಿರೆ ಕಡೆ ಜಾನುವಾರುಗಳ ಮೇವು ಸಾಗಿಸುತ್ತಿದ್ದ ಟೆಂಪೋ ಮುಂಭಾಗದಿಂದ ಬಂದ ಆಟೋರಿಕ್ಷಾಕ್ಕೆ ಸೈಡ್ ಕೊಡುವಾಗ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದ್ದು ಟೆಂಪೋದಲ್ಲಿದ್ದ ಚಾಲಕ ಸಹಿತ ಇನ್ನೊಬ್ಬ ಅಪಾಯದಿಂದ ಪಾರಾಗಿದ್ದಾರೆ.
ಈ ಸ್ಥಳದಲ್ಲಿ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಾಗಿ ರಸ್ತೆಯನ್ನು ಅಗೆದು ಹಾಕಲಾಗಿದ್ದು ಭಾರಿ ಮಳೆ ಸುರಿಯುತ್ತಿದ್ದ ಕಾರಣ ಅಪಘಾತ ಸಂಭವಿಸಿದೆ. ಟೆಂಪೋ ಬಿದ್ದ ಸ್ಥಳದ ಕೆಳಗಡೆ ಬೃಹತ್ ಗಾತ್ರದ ಕಂದಕವೂ ಇದೆ. ಟೆಂಪೋ ಕಂದಕಕ್ಕೆ ಉರುಳುತ್ತಿದ್ದರೆ ಹೆಚ್ಚಿನ ಅಪಾಯ ಉಂಟಾಗುವ ಸಾಧ್ಯತೆ ಇತ್ತು.