ಬಡವರ ಏಳಿಗೆಗೆ ಸದಾ ಬದ್ಧ: ಸಿಎಂ ಸಿದ್ಧರಾಮಯ್ಯ

ಬಡವರ ಏಳಿಗೆಗೆ ಸದಾ ಬದ್ಧ: ಸಿಎಂ ಸಿದ್ಧರಾಮಯ್ಯ


ಉಳ್ಳಾಲ: ಎಲ್ಲ ಜಾತಿ, ಧಮ೯ದವರ ಬಡವರನ್ನು ಸರಕಾರ ಮೇಲಕ್ಕೆತ್ತಲು ಸರಕಾರ ಹಲವಾರು ಕಾಯ೯ಕ್ರಮಗಳನ್ನು ಜಾರಿಗೆ ತಂದಿದೆ. ಇದರ ಬಗ್ಗೆ ಏನೇ ಟೀಕೆಗಳು ಬಂದರೂ ಸರಕಾರ ಯೋಜನೆಗಳನ್ನು ಮುಂದುವರಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಅವರು ಶುಕ್ರವಾರ ಉಳ್ಳಾಲ ಸೈಯ್ಯದ್ ಮದನಿ ದಗಾ೯ ಉರೂಸ್ ಕಾಯ೯ಕ್ರಮದಲ್ಲಿ ಸಾಮಾಜಿಕ ಭಾವೈಕ್ಯತಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು. 

ದೇವರಾಜ ಅರಸು ನಂತರ ಕನಾ೯ಟಕದಲ್ಲಿ 5 ವಷ೯ ಪೂಣ೯ಗೊಳಿಸಿದ ಮುಖ್ಯಮಂತ್ರಿ ಎಂಬ ಕೀತಿ೯ ತನಗೆ ಹೆಮ್ಮೆ ಇದೆ. ಇದನ್ನು ಜನತೆಯ ಏಳಿಗೆಗೆ ಬಳಸುತ್ತಿದ್ದೇನೆ ಎಂದರು.

ವೈವಿಧ್ಯತೆಯಲ್ಲಿ ಏಕತೆ ಕಾಣಬೇಕು. ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡುತ್ತಿದ್ದೇವೆ. ಸಮಾನ ಅವಕಾಶ ಒದಗಿಸಿ, ಎಲ್ಲರಿಗೂ ನ್ಯಾಯ ಒದಗಿಸಿದಾಗ ಸಂವಿಧಾನ ಯಶಸ್ಸು. ಇದೇ ಹಾದಿಯಲ್ಲಿ ಸರಕಾರ ನಡೆಯುತ್ತಿದೆ ಎಂದು ಅವರು ಹೇಳಿದರು.

ಇದಕ್ಕೂ ಮೊದಲು ಮುಖ್ಯಮಂತ್ರಿಗಳು ದಗಾ೯ ಭೇಟಿ ನೀಡಿದರು.

ಸ್ಪೀಕರ್ ಯು.ಟಿ. ಖಾದರ್, ಉಳ್ಳಾಲ ಖಾಝಿ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಮಾತನಾಡಿದರು. 

ಕಂದಾಯ ಸಚಿವ ಕೃಷ್ಣ ಭೈರೇಗೌಡ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ನಗರಾಭಿವೃದ್ಧಿ ಸಚಿವ ಬಿ. ಸುರೇಶ್, ಪೌರಾಡಳಿತ ಸಚಿವ ರಹೀಂ ಖಾನ್, ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್, ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ, ಜಿಲ್ಲಾ ವಕ್ಫ್ ಸಮಿತಿ ಅಧ್ಯಕ್ಷ ನಾಸೀರ್ ಲಕ್ಕಿಸ್ಟಾರ್, ದಗಾ೯ ಅಧ್ಯಕ್ಷ ಹನೀಫ್ ಹಾಜಿ ಮತ್ತಿತರರು ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article