
ಪಾಣೆಂಗಳೂರು ಹಳೇ ಸೇತುವೆಯಲದಲ್ಲಿ ಲಘವಾಹನ ಸಂಚಾರಕ್ಕೆ ಅವಕಾಶ ಕೋರಿ ಸಚಿವರಿಗೆ ಮನವಿ
ಬಂಟ್ವಾಳ: ಪಾಣೆಮಂಗಳೂರು ಹಳೆ ಸೇತುವೆಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿ ಪುರಸಭಾ ಸದಸ್ಯ ಸಿದ್ದೀಕ್ ಅವರ ನೇತೃತ್ವದ ನಿಯೋಗ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಿತು.
ಕೆಲದಿನಗಳ ಹಿಂದೆ ಬಂಟ್ವಾಳ ತಹಶೀಲ್ದಾರ್ ರವರು ಪಾಣೆಮಂಗಳೂರು ಹಳೇ ಸೇತುವೆಯಲ್ಲಿ ಎಲ್ಲಾ ವಾಹನಗಳನ್ನು ನಿಷೇಧಿಸಿ ಆದೇಶ ಹೊರಡಿಸಿರುವುದರಿಂದ ಪಾಣೆಮಂಗಳೂರು ಸಹಿತ ಸುತ್ತಮತ್ತಲಿನ ನಾಗರಿಕರು,ಶಾಲಾ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆಯಲ್ಲದೆ ಇಲ್ಲಿನ ವ್ಯಾಪರಸ್ಥರು ಕೂಡ ವ್ಯವಹಾರದಲ್ಲಿ ನಷ್ಟ ಉಂಟಾಗುತ್ತಿದೆ.
ತಹಶೀಲ್ದಾರರು ಹೊರಡಿಸಿದ ಆದೇಶ ಪುರಸಭೆಯ ಸಾಮಾನ್ಯ ಸಭೆಯಲ್ಲು ಬಿಸಿ, ಬಿಸಿ ಚರ್ಚೆ ಹಾಗೂ ಈ ಭಾಗದ ಸದಸ್ಯರ ಆಕ್ರೋಶಕ್ಕು ಕಾರಣವಾಗಿತ್ತು. ಇದೀಗ ಈ ವಿಚಾರ ದ.ಕ. ಜಿಲ್ಲಾ ಉಸ್ತುವಾರಿ ಸಚಿವರ ಅಂಗಳಕ್ಕು ತಲುಪಿದ್ದು, ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡುರಾವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಗಂಭೀರ ಚರ್ಚೆಯು ನಡೆದಿದೆ.
ಸಂಬಂಧಪಟ್ಟ ಇಲಾಖೆಯಿಂದ ಆದಷ್ಟು ಬೇಗ ಸೇತುವೆಯ ಸಾಮರ್ಥ್ಯ ಪರೀಕ್ಷೆ ವರದಿ ಬರುವ ತನಕ ಲಘು ವಾಹನಗಳನ್ನು ಎಂದಿನಂತೆ ಸಂಚರಿಸಲು ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಇರಾ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ, ಅಬ್ದುಲ್ ಖಾದರ್ ಬಂಗ್ಲಗುಡ್ಡೆ, ಖಾಲಿದ್ ಬೋಗೋಡಿ, ಅಬ್ದುಲ್ ಮುತ್ತಲಿಬ್ ಹಾಗೂ ಮತ್ತಿತರರು ನಿಯೋಗದಲ್ಲಿದ್ದರು.