
ನರಹರಿ ಪರ್ವತಕ್ಕೆ ಯಡತೊರೆ ಮಠದ ಶ್ರೀಗಳು ಹಠಾತ್ ಭೇಟಿ
Monday, June 30, 2025
ಬಂಟ್ವಾಳ: ಮೆಲ್ಕಾರ್ ಸಮೀಪದ ಪ್ರಕೃತಿ ಸೌಂದರ್ಯದ ತಪ್ಪಲಲ್ಲಿರುವ ನರಹರಿ ಪರ್ವತ ಶ್ರೀ ಸದಾಶಿವ ದೇವಸ್ಥಾನಕ್ಕೆ ಮೈಸೂರು ಕೆ.ಆರ್. ನಗರ ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತೀ ಮಠದ ಪೀಠಾಧೀಶ್ವರ ಶ್ರೀ ಶಂಕರ ಭಾರತೀ ಮಹಾಸ್ವಾಮಿಗಳು ಭೇಟಿ ನೀಡಿ ದೇವರ ದರ್ಶನ ಪಡೆದರು.
ನರಹರಿ ಪರ್ವತ ಕ್ಷೇತ್ರಕ್ಕೆ ಆದಿಶಂಕರಾಚಾರ್ಯರು ಬಂದಿರುವ ಕುರಿತು ಹಾಗೂ ಪ್ರಾಚೀನವಾದ ಶ್ರೀ ಶಾರದಾಂಬೆಯ ವಿಗ್ರಹ ಕ್ಷೇತ್ರದಲ್ಲಿತ್ತು ಎಂಬುದು ಇತಿಹಾಸ ಗ್ರಂಥ ಹಾಗೂ ತಂಬೂಲ ಪ್ರಶ್ನೆಯಲ್ಲಿ ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ಶ್ರೀಗಳು ಕ್ಷೇತ್ರಕ್ಕೆ ದಿಢೀರ್ ಭೇಟಿ ನೀಡಿ ವೀಕ್ಷಣೆ ನಡೆಸಿದರು. ಬಳಿಕ ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿ ಆದಿಶಂಕರಾಚಾರ್ಯರು ಕ್ಷೇತ್ರಕ್ಕೆ ಭೇಟಿ ನೀಡಿರುವ ದಾಖಲೆಗಳು ಸಿಕ್ಕಲ್ಲಿ ಮಾಹಿತಿ ನೀಡುವಂತೆ ತಿಳಿಸಿದರು.
ಈ ವೇಳೆ ಮಠದ ಪ್ರತಿನಿಧಿಗಳು, ನರಹರಿ ಪರ್ವತ ಕ್ಷೇತ್ರದ ಪ್ರಮುಖರು ಉಪಸ್ಥಿತರಿದ್ದರು.