ಪತ್ನಿಯ ಕೊಲೆಗೈದು ಪತಿಯ ಆತ್ಮಹತ್ತೆ ಪ್ರಕರಣ: ಬಡಗುಂಡಿ ಪರಿಸರ ಸ್ಮಶಾನ ಮೌನ, ಕಾರಣ ಇನ್ನೂನಿಗೂಢ

ಪತ್ನಿಯ ಕೊಲೆಗೈದು ಪತಿಯ ಆತ್ಮಹತ್ತೆ ಪ್ರಕರಣ: ಬಡಗುಂಡಿ ಪರಿಸರ ಸ್ಮಶಾನ ಮೌನ, ಕಾರಣ ಇನ್ನೂನಿಗೂಢ


ಬಂಟ್ವಾಳ: ತುಂಬು ಗರ್ಭಿಣಿ ಪತ್ನಿಯನ್ನು ಕುತ್ತಿಗೆ ಹಿಸುಕಿ ಬಳಿಕ ತಲೆದಿಂಬಿನಿಂದ ಮುಖಕ್ಕೆ ಬಿಗಿಹಿಡಿದು ಉಸಿರುಕಟ್ಟಿಸಿ ಕೊಲೆಗೈದ ಪತಿ ನೊಂದು ತಾನು ಆತ್ಮಹತ್ಯೆಗೈದ ಹೃದಯವಿದ್ರಾವಕ ಘಟನೆಯ ಬಳಿಕ ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಬಡಗುಂಡಿ ಪರಿಸರ ಸದ್ಯ ಸ್ಮಶಾನ ಮೌನವಾಗಿದೆ.

ವಿವಾಹವಾಗಿ 16 ವರ್ಷದ ಬಳಿಕ ಬಸುರಿಯಾದ ಪತ್ನಿಯನ್ನು ಪತಿಯೇ ದಾರುಣವಾಗಿ ಕೊಲೆಗೈದ ಘಟನೆ ಸದ್ಯ ಬಡಗುಂಡಿ ಸುತ್ತಮತ್ತ ಸಹಿತ ಇಡೀ ಬಂಟ್ವಾಳ ಪರಿಸರವನ್ನೇ ತಲ್ಲಣ, ಅಚ್ಚರಿಯನ್ನು ಅವರಿಸಿದಲ್ಲದೆ ನಾನಾ ಉಹಾಪೋಹಕ್ಕು ಕಾರಣವಾಗಿದೆ.

ಸದ್ಯ ಈ ಘಟನೆಗೆ ಕಾರಣ ಇನ್ನೂ ನಿಗೂಢವಾಗಿಯೇ ಉಳಿದಿದ್ದು,ಕೊಲೆಗೀಡಾದ ಜಯಂತಿ ಅವರ ತಂಗಿ ಸುಜಾತ ಫರಂಗಿಪೇಟೆ ಹಾಗೂ ಆತ್ಮಹತ್ಯೆಗೈದ ತಿಮ್ಮಪ್ಪ ಅವರ ಅಣ್ಣ ವಿಶ್ವನಾಥ್ ಅವರ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಬಂಟ್ಚಾಳ ಗ್ರಾಮಾಂತರ ಠಾಣೆಯ ಇನ್ಸ್‌ಪೆಕ್ಟರ್ ಶಿವಕುಮಾರ್ ನೇತೃತ್ವದ ತಂಡ ಜಯಂತಿಯವರ ಕೊಲೆ ಹಾಗೂ ಅಪರಾಧ ವಿಭಾಗದ ಎಸ್‌ಐ ಕಲೈಮಾರ್ ಮತ್ತವರ ಸಿಬ್ಬಂದಿಗಳು ತಿಮ್ಮಪ್ಪ ಮೂಲ್ಯ ಅವರ ಆತ್ಮಹತ್ಯೆಯ ಹಿಂದಿರುವ ನಿಗೂಢತೆಯನ್ನು ಭೇದಿಸಲು ಪ್ರಯತ್ನಿಸುತ್ತಿದ್ದು, ತನಿಖೆ ಮುಂದುವರಿದಿದೆ.

ಮೂಲತ: ಸಜೀಪಮೂಡ ಗ್ರಾಮದ ಮಿತ್ತಮಜಲು ನಿವಾಸಿ ತಿಮ್ಮಪ್ಪ ಮೂಲ್ಯ (52) ತನ್ನ ಪತ್ನಿ ತುಂಬು ಗರ್ಭಿಣಿಯಾದ ಜಯಂತಿಯನ್ನು ಕುತ್ತಿಗೆ ಹಿಸುಕಿ ಬಳಿಕ ಮುಖಕ್ಕೆ ತಲೆದಿಂಬಿನಿಂದ ಬಿಗಿ ಹಿಡಿದು ಉಸಿರುಗಟ್ಟಿಸಿ ಕೊಲೆಗೈದಿದ್ದು, ತದನಂತರ ನೊಂದು ತಾನು ಅಡುಗೆಮನೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆಗೈದಿದ್ದರು.

ಎರಡೂ ಮೃತದೇಹದ ಮರಣೋತ್ತರ ಪರೀಕ್ಷೆ ಗುರುವಾರ ರಾತ್ರಿಯೇ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆಸಲಾಗಿದ್ದು, ನಂತರ ವಾರೀಸುದಾರರಿಗೆ ಬಿಟ್ಟುಕೊಡಲಾಗಿತ್ತು.

ತಿಮಪ್ಪ ಮೂಲ್ಯ, ಜಯಂತಿ ಹಾಗೂ ಶಿಶು ಸಹಿತ ಮೂರು ಪಾರ್ಥಿವ ಶರೀರವನ್ನು ಬಡಗುಂಡಿಯ ಕಿಲ್ತೋಡಿಯಲ್ಲಿರುವ ಮೃತ ಜಯಂತಿ ಮನೆಗೆ ತಂದು ವಿಧಿ, ವಿಧಾನ ನೆರವೇರಿಸಿ ನರಿಕೊಂಬು ಗ್ರಾಮದಲ್ಲಿರುವ  ಹಿಂದು ರುದ್ರಭೂಮಿಯಲ್ಲಿ ಪತಿ-ಪತ್ನಿ ಇಬ್ಬರ ಶವ ಸಂಸ್ಕಾರವನ್ನು ಜೊತೆಯಾಗಿ ನೆರವೇರಿಸಲಾಗಿದ್ದರೆ, ಶಿಶುವಿನ ಶವವನ್ನು ಮಣ್ಣು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಇದೀಗ ಜಯಂತಿ ಅವರ ತವರೂರು ಬಡಗುಂಡಿಯಮನೆ ಖಾಲಿಯಾಗಿದೆ. ಕಳೆದ 16 ವರ್ಷಗಳ ಹಿಂದೆ ಇವರಿಗೆ ಮದುವೆಯಾಗಿದ್ದು, ಈವರೆಗೆ ಮಕ್ಕಳಾಗಿಲ್ಲ. ಪ್ರಸ್ತುತ ಪತ್ನಿ ಜಯಂತಿ ಗರ್ಭಿಣಿಯಾಗಿದ್ದು, ಜು.2 ರಂದು ಸೀಮಂತಕ್ಕು ದಿನ ನಿಗದಿಯಾಗಿತ್ತು.

ಇದರ ಸಿದ್ದತೆಯಲ್ಲು ತೊಡಗಿಸಿಕೊಂಡಿದ್ದ ತಿಮ್ಮಪ್ಪ ಅವರು ಬುಧವಾರ ಪತ್ನಿಯ ಸೀಮಂತಕ್ಕೆ ಹೊಸ ಸೀರೆ ಖರೀದಿಗೂ ಮುಂದಾಗಿದ್ದರು. ಅದಕ್ಕಾಗಿ ಮಿತ್ತಮಜಲಿನಲ್ಲಿರುವ ಅಣ್ಣನ ಅಂಗಡಿ ಕೆಲಸಕ್ಕು ಹೋಗಿರಲಿಲ್ಲ, ಆದರೆ ಪತ್ನಿಗೆ ಸೀಮಂತಕಕ್ಕಾಗಿ ಸೀರೆ ಖರೀದಿಸದೆ ಮನೆಯಲ್ಲೇ ಇದ್ದರೆನ್ನಲಾಗಿದೆ. ಪತ್ನಿ ಜಯಂತಿ ಬಂಟ್ವಾಳಕ್ಕೆ ತೆರಳಿ ಸರವಸಹಾಯ ಸಂಘದಿಂದ ಸಾಲಪಡೆದು, ಮನೆಗೆ ಬರುವಾಗ ಕೋಳಿ ಮಾಂಸವನ್ನು ತಂದುಪದಾರ್ಥ ಮಾಡಿ ಜೊತೆಯಾಗಿ ಊಟ ಕೂಡ ಮಾಡಿದ್ದರೆನ್ನಲಾಗಿದೆ.

ಅಂದು ರಾತ್ರಿ ಪತಿ-ಪತ್ನಿಯ ಮಧ್ಯೆ ಯಾವುದೋ ಕ್ಷುಲ್ಲಕ ವಿಚಾರದಲ್ಲಿ ಜಗಳವಾಗಿರುವ ಶಂಕೆ ವ್ಯಕ್ತವಾಗಿದ್ದು, ಇವರೊಳಗಿನ ಜಗಳ ತಾರಕಕ್ಕೇರಿದ್ದು, ಆಗ ಕುಪಿತನಾದ ತಿಮ್ಮಪ್ಪ ಪತ್ನಿಗೆ ಹಲ್ಲೆಗೈದು ಕುತ್ತಿಗೆ ಹಿಸುಕಿದಲ್ಲದೆ ಮುಖಕ್ಕೆ ತಲೆದಿಂಬು ಇರಿಸಿ ಉಸಿರುಗಟ್ಟಿಸಿ ಕೊಲೆಗೈದಿದ್ದು, ಬಳಿಕ ಈ ಘಟನೆಯಿಂದ ನೊಂದು ತಾನು ಕೂಡ ಅಡುಗೆ ಕೋಣೆಯ ಪಕ್ಕಾಸಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೈದಿದ್ದಾನೆ.

ತಿಮ್ಮಪ್ಪ ಮೂಲ್ಯ ಅವರು ಅಡುಗೆಕೋಣೆಯ ಪಕ್ಕಾಸಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದರೆ, ಇವರ ಪತ್ನಿ ಜಯಂತಿ ಅವರ ಮೃತದೇಹ ಮಲಗುವ ಕೋಣೆಯ ಬೆಡ್ಡಿನ ಕೆಳಗೆ ಪತ್ತೆಯಾಗಿತ್ತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article