ಚಕ್ರವರ್ತಿ ಸೂಲಿಬೆಲೆ ಮಾತಿಗೆ ಹೇರಿದ ನಿರ್ಬಂಧಕ್ಕೆ ವಿರೋಧವಿದೆ: ಸಾಮಾಜಿಕ ಕಾರ್ಯಕರ್ತೆ ರಮಿತಾ ಶೈಲೇಂದ್ರ

ಚಕ್ರವರ್ತಿ ಸೂಲಿಬೆಲೆ ಮಾತಿಗೆ ಹೇರಿದ ನಿರ್ಬಂಧಕ್ಕೆ ವಿರೋಧವಿದೆ: ಸಾಮಾಜಿಕ ಕಾರ್ಯಕರ್ತೆ ರಮಿತಾ ಶೈಲೇಂದ್ರ


ಕಾರ್ಕಳ: ರಾಷ್ಟ್ರೀಯ ಚಿಂತನೆಯ ಬಗ್ಗೆ ಕೆಲಸ ಮಾಡುವವರು ವೇದ, ಪುರಾಣ ಮಹಾಭಾರತ ಇಂತಹ ಗ್ರಂಥಗಳ ಮಹತ್ವಗಳನ್ನು ಸಾಮಾಜಿಕ ಜನರಿಗೆ ತಿಳಿಸುವ ಕೆಲಸ ಮಾಡುವವರು ದೇಶದ ಬಗ್ಗೆ ಇಲ್ಲಿಯ ನೆಲದ ಬಗ್ಗೆ ಅಭಿಮಾನ ಇರುವವರು ಚಕ್ರವರ್ತಿ ಸೂಲಿಬೆಲೆಯವರು. ಹಾಗಾಗಿ ಇವರ ಮಾತಿನ ಮೇಲೆ ನಿರ್ಬಂಧ ಹೇರಿರುವರಿಗೆ ನಮ್ಮ ಧಾರ್ಮಿಕ ಸಂಸ್ಕೃತಿಯ ಬಗ್ಗೆ ನಮ್ಮ ನೆಲಜಲದ ಹಿರಿಮೆಯ ಬಗ್ಗೆ ಎಲ್ಲಷ್ಟು ಜ್ಞಾನದ ಕೊರತೆ ಇದೆ ಎಂದು ಸಾಮಾಜಿಕ ಕಾರ್ಯಕರ್ತೆ ರಮಿತಾ ಶೈಲೇದ್ರ ಅಭಿಪ್ರಾಯಪಟ್ಟಿದ್ದಾರೆ.

ಚಕ್ರವರ್ತಿ ಸೂಲಿಬೆಲೆಯವರು ತಮ್ಮ ಉಪನ್ಯಾಸ ಮಾಲೀಕೆಗಳಲ್ಲಿ ಲೇಖನಗಳಲ್ಲಿ ಎಲ್ಲಿಯೂ ವೈಯಕ್ತಿಕವಾಗಿ ಯಾರನ್ನು ತೇಜವಾದೆ ಮಾಡಿಲ್ಲ ಹಾಗೂ ಅವರು ತಮ್ಮ ದೇಶದ ಬಗ್ಗೆ ನಮ್ಮ ನೆಲದ ಬಗ್ಗೆ ನಮ್ಮ ಧಾರ್ಮಿಕ ಸಾಂಸ್ಕೃತಿಯ ವೈಭವದ ಬಗ್ಗೆ ಮಾತನಾಡಿರುತ್ತಾರೆ. ತನ್ನ ಮಾತಿನ ಮೂಲಕ ಭಾರತವನ್ನು ಅಖಂಡ ಭಾರತವಾಗಿ ಒಂದು ಪರಿಕಲ್ಪನೆಗೆ ತರುವಂತಹ ವ್ಯಕ್ತಿ ಎಂದು ಕೂಡ ದೇಶದ್ರೋಹದ ಹೇಳಿಕೆಯನ್ನು ಕೊಟ್ಟಿಲ್ಲ ದೇಶ ಅವಿಸ್ಮತೆಯ ಬಗ್ಗೆ ಮಾತನಾಡಿರುತ್ತಾರೆ ಹಾಗಾಗಿ ಅವರ ಮಾತಿನ ಬಗ್ಗೆ ನಿರ್ಬಂಧ ಏರಿರುವ ಬಗ್ಗೆ ವಿಚಾರ ಮಾಡುವಾಗ ಹಾಸ್ಯಸ್ಪದಕವಾಗಿ ಕಾಣುತ್ತದೆ. ಇನ್ನಾದರೂ ಹಿಂದು ಬಾಂಧವರು ಎಚ್ಚೆತ್ತುಕೊಳ್ಳಬೇಕು ರಾಷ್ಟ್ರ ಕಾರ್ಯಕ್ಕೆ ಕೈಜೋಡಿಸಿ ಇಂತಹ ರಾಷ್ಟ್ರ ಪ್ರೇಮಿಗಳ ಮಾತಿಗೆ ಜೊತೆಯಾಗಬೇಕು ಎಂದು ಅವರು ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article