
ಮಣಿಪಾಲದಲ್ಲಿ ರಸ್ತೆ ದುರಂತ: ಸಾಲಿಗ್ರಾಮದ ಯುವಕ ಸಾವು
Saturday, June 21, 2025
ಕುಂದಾಪುರ: ಮಣಿಪಾಲದಲ್ಲಿ ಬೈಕ್ ಅಪಘಾತದಿಂದ ಗಂಭೀರ ಗಾಯಗೊಂಡಿದ್ದ ಸಾಲಿಗ್ರಾಮದ ನಿವಾಸಿ ಆಸ್ತಿಕ್ ಮೆಂಡನ್ ಎಂಬ ಯುವಕ ಚಿಕಿತ್ಸೆ ಫಲಿಸದೆ ಇಂದು ಕೆಎಂಸಿ ಮಣಿಪಾಲ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ.
ಅಪಘಾತದಲ್ಲಿ ತಲೆಗೆ ಬಲವಾಗಿ ಪೆಟ್ಟು ಬಿದ್ದ ಪರಿಣಾಮ ಒಂದು ವಾರದಿಂದ ಕೋಮಾವಸ್ಥೆಯಲ್ಲಿದ್ದು ಶನಿವಾರ ಬೆಳಗ್ಗೆ ಅಸುನೀಗಿರುತ್ತಾರೆ. ಮಣಿಪಾಲದ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದ ಇವರು ತಂದೆ ತಾಯಿ ಸಹೋದರನನ್ನು ಅಗಲಿದ್ದಾರೆ.
ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.