ವಿಶ್ವವಿದ್ಯಾನಿಲಯ ಕಾಲೇಜಿನ ವತಿಯಿಂದ ಅಂತರರಾಷ್ಟ್ರೀಯ ಯೋಗ ದಿನಾಚರಣೆ

ವಿಶ್ವವಿದ್ಯಾನಿಲಯ ಕಾಲೇಜಿನ ವತಿಯಿಂದ ಅಂತರರಾಷ್ಟ್ರೀಯ ಯೋಗ ದಿನಾಚರಣೆ


ಮಂಗಳೂರು: ಅಂತರರಾಷ್ಟ್ರೀಯ ಯೋಗ ದಿನದ ಪ್ರಯುಕ್ತವಾಗಿ ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲರು, 5 ಕಾರ್ ಎನ್‌ಸಿಸಿ ನೌಕಾಪಡೆ ಘಟಕದ ಕೆಡೆಟ್‌ಗಳು, ಎನ್‌ಸಿಸಿ ಅಧಿಕಾರಿಗಳು ಮತ್ತು ಸೈನಿಕರ ಜೊತೆಗೂಡಿ 11ನೇ ವರ್ಷದ ಯೋಗ ದಿನವನ್ನು ಕದ್ರಿ ಪಾರ್ಕ್ ಬಳಿ ಇರುವ ಯುದ್ಧ ಸ್ಮಾರಕದಲ್ಲಿ ಆಚರಿಸಲಾಯಿತು.


ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಆಗಮಿಸಿದ ಭಾರತೀಯ ನೌಕಾಪಡೆಯ ನಿವೃತ್ತ ಪಿ.ಒ ಸುಧೀರ್ ಪೈ ಮಾತನಾಡಿ, ಯೋಗ ದಿನದ ಮಹತ್ವ ಮತ್ತು ಅದರ ಪ್ರಯೋಜನಗಳ ಬಗ್ಗೆ ಮಾತನಾಡಿದರು. ಸಶಸ್ತ್ರ ಪಡೆಗಳಿಗೆ ಸೇರುವ ಪ್ರಸ್ತುತತೆಯನ್ನು ಅವರು ತಿಳಿಸಿದರು.

ವಿಶ್ವ ವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ  ಮಾತನಾಡಿ, ಯೋಗದಿಂದ ಶರೀರಕ್ಕೆ ಉಂಟಾಗುವ ಉಪಯೋಗದ ಬಗ್ಗೆ ತಿಳಿಸಿದರು.


ಈ ವರ್ಷದ ವಿಶ್ವ ಯೋಗ ದಿನದ ದ್ಯೇಯವಾಕ್ಯವಾಗಿರುವ ‘ಒಂದು ಭೂಮಿ ಮತ್ತು ಒಂದು ಆರೋಗ್ಯಕ್ಕಾಗಿ ಯೋಗ ಕಾರ್ಯಕ್ರಮದಲ್ಲಿ ಕೆಡೆಟ್‌ಗಳು ಸಕ್ರಿಯವಾಗಿ ಭಾಗವಹಿಸಿ. ಯೋಗದ ಒಟ್ಟಾರೆ ಯೋಗಕ್ಷೇಮ, ಸಾಮರಸ್ಯಕ್ಕೆ ಸಹಕಾರ. ದೈಹಿಕ ಭಂಗಿಗಳು, ಉಸಿರಾಟದ ತಂತ್ರಗಳು ಮತ್ತು ಧ್ಯಾನವನ್ನು ಸಂಯೋಜಿಸಿ ಮನಸ್ಸು-ದೇಹವನ್ನು ಆರೋಗ್ಯವಾಗಿಡಲು ಸಹಕಾರಿಯಾಗುತ್ತದೆ ಎಂದು ತಿಳಿದರು. 

ಕಾರ್ಯಕ್ರಮವನ್ನು ಲೆಫ್ಟಿನೆಂಟ್ ಕಮಾಂಡರ್ ಪ್ರೊ. ಯತೀಶ್ ಕುಮಾರ್ ಸ್ವಾಗತಿಸಿದರು. ಮೇಜರ್ ಡಾ. ಜಯರಾಜ್ ವಂದಿಸಿದರು.

ಯೋಗ ಪ್ರದರ್ಶನದಲ್ಲಿ ವಿವಿ ಕಾಲೇಜಿನ 10 ಕೆಡೆಟ್‌ಗಳು ಮತ್ತು 14 ಜನ ಸೈನಿಕರು ಉಪಸ್ಥಿತರಿದ್ದರು. ಕೆಡೆಟ್‌ಗಳು ಸೂರ್ಯ ನಮಸ್ಕಾರ, ಪದ್ಮಾಸನ, ಧನುರಾಸನ, ನಟರಾಜಾಸನವನ್ನು ಪ್ರದರ್ಶಿಸಿದರು.















Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article